Powered By Blogger

ಗುರುವಾರ, ಡಿಸೆಂಬರ್ 4, 2014

ಮಹಿಳಾ ಬ್ಯಾಂಕಗಳು

ಮಹಿಳಾ ಬ್ಯಾಂಕಗಳು


  •  ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ಕಲ್ಪನೆಯೊಂದಿಗೆ ಹುಟ್ಟಿಕೊಂಡಿರುವ ಬ್ಯಾಂಕುಗಳೇ ಮಹಿಳಾ ಬ್ಯಾಂಕಗಳು
  •  ವಿಶ್ವದ ಮೊದಲ ಮಹಿಳಾ ಬ್ಯಾಂಕ ಸ್ಥಾಪಿಸಿದ ರಾಷ್ಟ್ರ ಪಾಕಿಸ್ತಾನ.
  •  ಮೊದಲ ಮಹಿಳಾ ಬ್ಯಾಂಕ್ ನಿ, ಪಾಕಿಸ್ತಾನ (First Women Bank Limited) ಇದು 1989 ರಲ್ಲಿ ಕರಾಚಿಯಲ್ಲಿ ಸ್ಥಾಪಿಸಲಾಯಿತು.
  •  ಮಹಿಳೆಯರಿಗಾಗಿ ಬ್ಯಾಂಕ್ ಸ್ಥಾಪಿಸಿದ ವಿಶ್ವದ ಎರಡನೇ ರಾಷ್ಟ್ರ ತಾಂಜೆನಿಯಾ
  •  ತಾಂಜೆನಿಯಾ ಮಹಿಳಾ ಬ್ಯಾಂಕ್ ನಿ. (Tanzania Women's Bank Limited) ಇದು 2007 ಸ್ಥಾಪಿಸಲಾಯಿತು.
  •  ಮಹಿಳೆಯರಿಗಾಗಿ ಬ್ಯಾಂಕ್ ಸ್ಥಾಪಿಸಿದ ರಾಷ್ಟ್ರಗಳಲ್ಲಿ ಭಾರತ ಮೂರನೇಯ ದೇಶ.
  •  ಭಾರತೀಯ ಮಹಿಳಾ ಬ್ಯಾಂಕ್ ಅನ್ನು 2013 ರಲ್ಲಿ ಸ್ಥಾಪಿಸಲಾಯಿತು.
  •  ನವೆಂಬರ್ 19.2013 ರಂದು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 94 ಜನ್ಮ ದಿನಾಚರಣೆ ಸವಿನೆನಪಿನಲ್ಲಿ ದೆಹಲಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಉದ್ಘಾಟಿಸಿದರು.
  • ಭಾರತೀಯ ಮಹಿಳಾ ಬ್ಯಾಂಕ್ ಮೊದಲ ಹಾಗೂ ಸದ್ಯದ ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕರು ಉಷಾ ಅನಂತ ಸುಬ್ರಮಣ್ಯಂ
  • ಭಾರತೀಯ ಮಹಿಳಾ ಬ್ಯಾಂಕ್ ಬೆಂಗಳೂರು ಸೇರಿದಂತೆ ದೇಶದಲ್ಲೆಡೆ 7 ಶಾಖೆಗಳನ್ನು ತೆರೆದಿದೆ.

ಬುಧವಾರ, ಡಿಸೆಂಬರ್ 3, 2014

ಚಿಟ್ಟೆಗಳು

ಚಿಟ್ಟೆಗಳು

--> ವಿಶ್ವದಲ್ಲಿ 25,000 ಹೆಚ್ಚು ಬಗೆಯ ಚಿಟ್ಟೆಗಳಿವೆ.
--> ಹೆಣ್ಣು ಚಿಟ್ಟೆ ತನ್ನ ಜೀವಿತಾವಧಿಯಲ್ಲಿ 100-4,000ವರೆಗೆ ಮೊಟ್ಟೆಗಳನ್ನು ಇಡುತ್ತದೆ.
--> ಪರಾಗಸ್ಪರ್ಶಕ ಜೀವಿಗಳಲ್ಲಿ ಜೇನು ಹುಳದ ನಂತರ ಸ್ಥಾನ ಚಿಟ್ಟೆಗೆ
--> ಅಂಟಾರ್ಕ್ಟಿಕ ಖಂಡದಲ್ಲಿ ಚಿಟ್ಟೆಗಳೆ ಕಾಣಸಿಗವು
--> ಚಿಟ್ಟೆಗಳ ಕುರಿತು ಅಧ್ಯಯನ ಮಾಡುವವರಿಗೆ 'ಲೆಪಿಡೋಪ್ಟರಿಸ್ಟ್'ಎನ್ನುತ್ತಾರೆ.
--> ಭಾರತದ ಮೊದಲ ಚಿಟ್ಟೆ ಪಾರ್ಕ ಕೇರಳದಲ್ಲಿದೆ.
--> ಭಾರತದ ಎರಡನೇ ಚಿಟ್ಟೆ ಪಾರ್ಕ (ಖಾಸಗಿ ಒಡೆತನದ) ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿದೆ
--> ಗಂಟೆಗೆ 19 ರಿಂದ 40 ಕೀ.ಮೀ ವರೆಗೆ ಚಿಟ್ಟೆಗಳು ಹಾರಬಲ್ಲವು.
--> ಚಿಟ್ಟೆಗೆ ಹಾರಲು ಸೂರ್ಯನ ಬೆಳಕೆ ಆಧಾರ, ಸೂರ್ಯನ ಬೆಳಕು ಹೆಚ್ಚಿರುವಾಗ ತುಂಬಾ ಚೈತನ್ಯದಿಂದ ಹಾರಾಡುತ್ತವೆ
--> ಚಿಟ್ಟೆಗಳಿಗೆ ಬಾರಿ ಇರುವದಿಲ್ಲ ಜೊತೆಗೆ ಅದು ಏನನ್ನು ತಿನ್ನುವದಿಲ್ಲ ಕಾಲುಗಳಿಂದಲೇ ವಾಸನೆ ಗ್ರಹಿಸುತ್ತವೆ
--> ಹೊಟ್ಟೆಯ ಭಾಗದಲ್ಲಿರುವ SPIRACLE ಎಂಬ ಗ್ರಂಥೀಯ ಮೂಲಕ ಉಸಿರಾಡುತ್ತದೆ.
--> ಚಿಟ್ಟೆಗಳ ಆಯುಷ್ಯ 2 ವಾರಗಳಿಂದ 4 ವಾರಗಳವರೆಗೆ ಮಾತ್ರ

ವೈದ್ಯ ಸುಭಾಷ ಮುಖ್ಯೋಪಾಧ್ಯಾಯ.

ವೈದ್ಯ ಸುಭಾಷ ಮುಖ್ಯೋಪಾಧ್ಯಾಯ

  • ಡಾ|| ಸುಭಾಷ ಮುಖ್ಯೋಪಾಧ್ಯಾಯ ಒಬ್ಬ ಭಾರತೀಯ ವೈದ್ಯ, ಜನಿಸಿದ್ದು 1931 ಜನೆವರಿ 16 ರಂದು ಬಿಹಾರದ ಹಜಾರಿಬಾಗ್ ನಲ್ಲಿ(ಇದಿ ಈಗ ಜಾರ್ಖಂಡ್ ನಲ್ಲಿದೆ), ಡಾ|| ಸುಭಾಷ ಮುಖ್ಯೋಪಾಧ್ಯಾಯ ಅವರೊಬ್ಬ ಕೊಂಡಾಡದ ನಾಯಕ, ತಮ್ಮ ಸಾಧನೆಗಳಿಗೆ ಮನ್ನಣೆ ಸಿಗದುದ್ದಕ್ಕಾಗಿ 1981 ರಂದು ಜೂನ್ 19ರಂದು ಕಲ್ಕತ್ತದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಶರಣಾದರು.
  • ಡಾ|| ಸುಭಾಷ ಮುಖ್ಯೋಪಾಧ್ಯಾಯ ವಿಶ್ವದ ಎರಡನೇ ಹಾಗೂ ಭಾರತದ(ಏಷ್ಯಾದ) ಪ್ರಥಮ ಪ್ರನಾಳ ಶಿಶುವಿನ ನಿರ್ಮಾತೃ, ಪ್ರನಾಳ ಶಿಶುವಿನ ತಯಾರಿಕೆಯನ್ನು ಅತ್ಯಂತ ಸರಳ ಹಾಗೂ ಯಶಸ್ವಿ ವಿಧಾನವನ್ನು ಅವರು ಕಂಡು ಹಿಡಿದಿದ್ದರು.
  • ಭಾರತದ ಪ್ರಥಮ ಪ್ರನಾಳ ಶಿಶು "ದುರ್ಗಾ ಅಲಿಯಾಸ್ ಕನುಪ್ರಿಯಾ ಅಗರ್ ವಾಲ್" ರನ್ನು ಸಂಶೋಧಿಸಿದ ಪ್ರಥಮ ವ್ಯಕ್ತಿ ಅವರು, ದುರ್ಗಾ ಜನಿಸಿದ್ದು ಅಕ್ಟೋಬರ್ 3 1978 ರಂದು, ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿಸ್ ಬ್ರೌನ್ ಜನಿಸಿದ್ದು 25 ಜುಲೈ 1978 ರಂದು, ಅಂದರೆ ಲೂಯಿಸ್ ಬ್ರೌನ್ ದಿನಗಳ ನಂತರ ದುರ್ಗಾ ಜನಿಸಿದ್ದು.
  • ತಮ್ಮ ಜೀವಿತಾವಧಿಯಲ್ಲಿ ಸಮಾಜ ಶಾಹಿಯ ನಿರ್ಲಕ್ಷ್ಯ, ಅವಮಾನ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ಕಿರುಕಳ ಇವುಗಳಿಂದ ಅವರು ಬೇಸತ್ತು ಹೋಗಿದ್ದರು, ತಮ್ಮ ಜೀವಮಾನದಲ್ಲಿ ತಮ್ಮ ಸಾಧನೆಗಳಿಗೆ ಮನ್ನಣೆ ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾದರು. ಅಲ್ಲದೇ ಪಶ್ಚಿಮ ಬಂಗಾಳದ ಸರ್ಕಾರ ಅವರನ್ನು ತುಂಬಾ ಶೋಚನಿಯವಾಗಿ ನಡೆಸಿಕ್ಕೊಂಡಿತು, ಅವರನ್ನು ಅಂತರಾಷ್ಟೀಯ ಸಮ್ಮೇಳನಗಳಿಗೆ ಹಾಜರಾಗಲೂ ಅನುಮತಿ ನಿರಾಕರಿಸಿತು, ಅಲ್ಲದೇ ತಮ್ಮ ವಿಚಾರಗಳನ್ನು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಹಂಚಿಕ್ಕೋಳ್ಳಲು ನಿರ್ಭಂದ ಹೇರಿತ್ತು.
  • ಡಾ|| ಸುಭಾಷ ಮುಖ್ಯೋಪಾಧ್ಯಾಯ ಅವರು ಇಂಗ್ಲೆಂಡಿನ ವಿಜ್ಞಾನಿಗಳಾದ ಪೆಟ್ರಿಕ್ ಸ್ಟೆಪ್ಟ ಮತ್ತು ರಾಬರ್ಟ್ ಎಡ್ವರ್ಡ್ ಜೊತೆ ಕೆಲಸ ಮಾಡಿ ವಿಶ್ವದ ಪ್ರಥಮ ಪ್ರನಾಳ ಶಿಶುವಿನ ಉದಯಕ್ಕೂ ಕಾರಣರಾಗಿದ್ದಾರೆ,
  • ಇವರ ಸಾಧನೆಗಳನ್ನು ಸಮಾಜ ಹಾಗೂ ಸರ್ಕಾರ ಗುರುತಿಸದ್ದಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾದರೂ, ಅದ್ಯಾಗೂ ICMR(INDIAN COUNCIL FOR MEDICAL RESEARCH) ಅವರ ಸಾಧನೆಯನ್ನು ಅವರು ಆತ್ಮಹತ್ಯೆ ಮಾಡಿಕೊಂಡ 21 ವರ್ಷಗಳ ನಂತರ 2002 ರಲ್ಲಿ ಗುರುತಿಸಿತು,
  • ಡಾ|| ಸುಭಾಷ ಮುಖ್ಯೋಪಾಧ್ಯಾಯ ರವರ ಜೀವನ ಪ್ರೇರಿತ ಒಂದು ಚಲನಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಹೆಸರು "ಏಕ್ ಡಾಕ್ಟರ್ ಕೀ ಮೌತ್ " ಇದು 1990 ರಲ್ಲಿ ಬಿಡುಗಡೆಯಾಯಿತು, ಇದನ್ನು ತಪ್ಹನ್ ಸಿನ್ಹಾರವರು ನಿರ್ದೇಶಿಸಿದ್ದಾರೆ.

ಸ್ವತಂತ್ರ ಭಾರತದ ಮೊದಲ ಮತದಾರ

ಸ್ವತಂತ್ರ ಭಾರತದ ಮೊದಲ ಮತದಾರ

'ಶ್ಯಾಮ ಶರಣ ನೇಗಿ' ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರ. ನೇಗಿ ಜನಿಸಿದ್ದು ಹಿಮಾಚಲ ಪ್ರದೇಶದ ಕಲ್ಪಾದಲ್ಲಿ, ನೇಗಿ ವೃತ್ತಿಯಲ್ಲಿ ಶಿಕ್ಷಕ, ಭಾರತದಲ್ಲಿ ಮೊದಲ ಬಾರಿಗೆ 1951 ರಲ್ಲಿ ಸಾರ್ವತ್ರಿಕ ಚುನಾವಣೆ ಪ್ರಾರಂಭವಾಯಿತು. ಬಹುತೇಕ ಭಾರತದಲ್ಲಿ 1952 ರ ಫೆಬ್ರುವರಿಯಲ್ಲಿ ಚುನಾವಣೆಗಳು ನಡೆದವು, ಆದರೆ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದ ಕಾರಣದಿಂದ ಐದು ತಿಂಗಳು ಮೊದಲೇ ಚುನಾವಣೆಗಳು ಪ್ರಾರಂಭವಾದವು. ಆದರೆ ಆ ಸಮಯದಲ್ಲಿ ಮತದಾರರು ಮತಗಟ್ಟೆಗೆ ತೆರಳುವುದು ದುಸ್ತರವಾಗಿತ್ತು.ಮತಗಟ್ಟೆ ಅಧಿಕಾರಿಯಾಗಿದ್ದ ನೇಗಿ ಮೊದಲಿಗೆ ತಮ್ಮ ಮತವನ್ನು ಚಲಾಯಿಸಿದರು, ಅಲ್ಲದೇ ಇತ್ತೀಚಿಗೆ 2014 ರಲ್ಲಿ ಜರುಗಿದ ಲೋಕಸಭೆಯ ಚುನಾವಣೆಯಲ್ಲಿ ಮತ ಚಲಾಯಿಸಿದು ಹೀಗಾಗಿ ನೇಗಿ ಭಾರತದ ಮೊದಲ ಹಾಗೂ ಹಿರಿಯ ಮತದಾರ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.

ಡಾ|| ಎಸ್ ಚಂದ್ರಶೇಖರ್

ಡಾ|| ಎಸ್ ಚಂದ್ರಶೇಖರ

  • ಡಾ.ಸುಬ್ರಮಣಿಯನ್ ಚಂದ್ರಶೇಖರ್ ವಿಶ್ವವಿಖ್ಯಾತ ಖಗೋಳ ಭೌತಶಾಸ್ತ್ರಜ್ಞರಾಗಿದ್ದಾರೆ. ಖಗೋಳ ಶಾಸ್ತ್ರದಲ್ಲಿ ನಡೆಸಿದ ಅಸಾಧಾರಣ ಸಂಶೋಧನಾ ಕಾರ್ಯಕ್ಕಾಗಿ ಡಾ|| ಎಸ್ ಚಂದ್ರಶೇಖರ್ ಗೆ 1983 ರಲ್ಲಿ ,ಭೌತಶಾಸ್ತ್ರ ವಿಭಾಗದ ನೊಬೆಲ್ ಪಾರಿತೋಷಕವನ್ನು ನೀಡಲಾಯಿತು. ಈ ಪಾರಿತೋಷಕವನ್ನು ಅವರು ಅಮೆರಿಕಾದ ವಿರಿಯಮ್ ಫೌಲರ್ ಜೊತೆ ಹಂಚಿಕೊಂಡರು.
  • ಪ್ರೊಫೆಸರ್ ಚಂದ್ರಶೇಖರ್, ಬೌತಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಪಡೆದ ಡಾ.ಸಿ,ವಿ,ರಾಮನ್ ರ ಸೋದರನ ಮಗ. ಅವರು 1910 ರಲ್ಲಿ ಲಾಹೋರ್ ನಲ್ಲಿ ಜನಿಸಿದರು.ಮದ್ರಾಸನ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಅನಂತರ ಕೇಂಬ್ರಿಜನ್ ಟ್ರಿನಿಟಿ ಕಾಲೇಜನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. 1933 ರಿಂದ 1937 ರವರೆಗೆ ಡಾ.ಚಂದ್ರಶೇಖರ್ ತಾರೆಗಳ ವಿಕಾಸದ (stellar evolution) ಬಗ್ಗೆ ಅಧ್ಯಯನ ನಡೆಸಿದರು. 25 ನೇ ವಯಸ್ಸಿನಲ್ಲಿ ಶಿಥಿಲಗೊಳ್ಳುತ್ತಿದ್ದ ತಾರೆಗಳ ಬಗ್ಗೆ ಸಿದ್ದಾಂತವನ್ನು ಮಂಡಿಸಿ ಇಡೀ ವಿಶ್ವವನ್ನೇ ಚಕಿತಗೊಳಿಸಿದರು.
  • 1938 ರಲ್ಲಿ ಡಾ. ಚಂದ್ರಶೇಖರ್ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆದರು. 1939 ರಲ್ಲಿ ಅವರು ಬರೆದ 'ಆ್ಯನ್ ಇಂಟ್ರಡಕ್ಷನ್ ಟು ದಿ ಸ್ಟಡಿ ಆಫ್ ಸ್ಟೆಲ್ಲರ್ ಸ್ಟ್ರಕ್ಚರ್' ಎಂಬ ಪುಸ್ತಕವನ್ನು ಈಗಲೂ ವಿಶ್ವಾದಾದಂತ್ಯ ರೆಫರೆನ್ಸ್ ಪುಸ್ತಕವಾಗಿ ಉಪಯೋಗಿಸಲಾಗುತ್ತಿದೆ. ವೈಟ್ ಡಾರ್ಫ್ಸ(white dwarfs) ಬಗ್ಗೆ ಅವರು ಕಂಡು ಹಿಡಿದಿರುವ ಅಂಶಗಳು ವಿಖ್ಯಾತವಾಗಿವೆ. 'ಚಂದ್ರಶೇಖರ್ ಲಿಮಿಟ್' ಎಂದು ಹೆಸರು ಪಡೆದಿರುವ ತಾರೆಗಳಿಗೆ ಸಂಬಂಧಿಸಿದ ಅವರ ಶೋಧನೆ ಹೊಸಯುಗಾರಂಭಕ್ಕೆ ನಾಂದಿಯಾಯಿತು.

ಕ್ವಿಟ್ ಇಂಡಿಯಾ ದಿನಾಚರಣೆ

 ಕ್ವಿಟ್ ಇಂಡಿಯಾ ದಿನಾಚರಣೆ

  • ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆ ಗುರುತುಗಳಿವೆ. ಮೊದಲನೆಯದು 1857ರ ಸಿಪಾಯಿ ದಂಗೆ. ಎರಡನೆಯದು 1942ರ ಕ್ವಿಟ್‌ ಇಂಡಿಯಾ(ಭಾರತ ಬಿಟ್ಟು ತೊಲಗಿ) ಆಂದೋಲನ. ದೇಶದ ಸ್ವಾತಂತ್ರ್ಯ ವೀರರು 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಎಂಬುದಾಗಿ ಅಂತಿಮ ತಾಕೀತು ನೀಡಿದ ದಿನ 1942ರ ಆಗಸ್ಟ್ 9. ಮಹಾತ್ಮಾ ಗಾಂಧಿ ನೇತೃತ್ವದ ಚಳವಳಿಕಾರರು ಮುಂಬಯಿಯಲ್ಲಿ ಈ ಘೋಷಣೆ ನಡೆಸಿದರು.
    ಅಂದು ತ್ರಿವರ್ಣ ಪತಾಕೆಯಡಿ ಎಲ್ಲಾ ಚಳವಳಿಕಾರರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೋತ್ಪಾಟಿಸಲು ಸಿದ್ಧರಾದ ಮಹತ್ವದ ದಿನವದು.

    ಬ್ರಿಟಿಷರನ್ನು ಸಂಧಾನಕ್ಕೆ ಕರೆ ತರುವ ಗುರಿಯೊಂದಿಗೆ ಗಾಂಧೀಜಿ ಅವರು ಸಹನಶೀಲ ಪ್ರತಿರೋಧವನ್ನು ತೋರಿಸುವಂತೆ ಜನರಿಗೆ ಕರೆ ನೀಡಿದರು. ಮುಂಬೈಯ ಗೊವಾಲಿಯ ಮೈದಾನದಲ್ಲಿ 1942ರ ಆಗಸ್ಟ್ 8ರಂದು ಚಾಲನೆ ನೀಡಿದ ಈ ಹೋರಾಟಕ್ಕೆ 'ಮಾಡು ಇಲ್ಲವೇ ಮಡಿ' ಎಂಬ ಘೋಷಣಾ ವಾಕ್ಯವನ್ನು ನೀಡಿದರು. ಅಂದಿನಿಂದ ಈ ಮೈದಾನಕ್ಕೆ ಆಗಸ್ಟ್ ಕ್ರಾಂತಿ ಮೈದಾನ ಎಂದು ಮರು ನಾಮಕರಣ ಮಾಡಲಾಯಿತು.

    ಗಾಂಧಿಯವರ ಅಮೋಘವಾದ ಸತ್ವಯುತ ದೇಶಭಕ್ತಿಯ ಭಾಷಣದ ನಂತರ, ಹಲವಾರು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಗಾಂಧೀಜಿಯವರನ್ನು ಪುಣೆಯ ಆಗಾಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿರಿಸಲಾಯಿತು. ಇದು ಕ್ವಿಟ್ ಇಂಡಿಯ ಚಳವಳಿಯನ್ನು ಮತ್ತಷ್ಟು ಬಲಗೊಳಿಸಿತು.

    ಚಳುವಳಿಯ ತೀಕ್ಷ್ಣತೆಯನ್ನು ಅರಿತ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಸೆರೆಮನೆಗೆ ಹಾಕಿದ್ದರಿಂದಾಗಿ ನಾಯಕರಿಲ್ಲದೆಯೇ ಚಳುವಳಿ ಉಗ್ರ ಸ್ವರೂಪವನ್ನು ಕಂಡದ್ದು ಈ ಚಳುವಳಿಯ ಹೆಗ್ಗಳಿಕೆ. ಇಡೀ ದೇಶದಲ್ಲಿ ಕ್ರಾಂತಿಯ ಅಲೆ ಎದ್ದಿತು. ಕ್ವಿಟ್ ಇಂಡಿಯ ಚಳುವಳಿಗೆ ಭಾರಿ ಸಂಖ್ಯೆಯ ಬೆಂಬಲ ವ್ಯಕ್ತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮ ನೆರೆಯಲಾರಂಭಿಸಿ ಹೊಸ ತಿರುವನ್ನು ಕಂಡಿತು. ದೇಶದ ಮೂಲೆ ಮೂಲೆಯಲ್ಲೂ ಈ ಘೋಷಣೆಯು ಜನರನ್ನುಬಡಿದೆಬ್ಬಿಸಿತು.

    ಅರುಣಾ ಅಸಫ್ ಅಲಿ ಹಾಗೂ ಸುಚೇತ ಕೃಪಲಾನಿಯವರು ಚಳವಳಿಯ ಮುಂದಾಳತ್ವವನ್ನು ವಹಿಸಿಕೊಳ್ಳುವುದರೊಂದಿಗೆ ಯುವಕರು ಹೆಚ್ಚೆಚ್ಚು ಸಕ್ರಿಯರಾಗಲಾರಂಭಿಸಿದರು. ಕೃಷಿಕರು ಬಹು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಈ ಚಳವಳಿಯ ಬಹು ಮುಖ್ಯ ಅಂಶವಾಗಿತ್ತು.

    ಬ್ರಿಟಿಷರ ದಬ್ಬಾಳಿಕೆಯು ದೇಶದ ಜನರ ಕಣಕಣದಲ್ಲೂ ರಕ್ತ ಕುದಿಯುವಂತೆ ಮಾಡಿತ್ತು ಎಂಬುದಕ್ಕೆ ಸಾಕ್ಷಿಯಾದ ಘಟನೆ ಕ್ವಿಟ್ ಇಂಡಿಯಾ ಆಂದೋಲನ. ಕ್ವಿಟ್ ಇಂಡಿಯ ಚಳವಳಿಯ ಜ್ವಾಲೆಗಳು ಬ್ರಿಟಿಷ್ ಆಡಳಿತದ ಬುಡ ಹತ್ತಿ ಉರಿಯಲಾರಂಭಿಸಿತು. ಅದರ ಕಾವಿನ ಪರಿಣಾಮವೇ ಐದು ವರ್ಷದ ಬಳಿಕ ನಾವು 1947ರ ಆಗಸ್ಟ್ 15ರಂದು ಗಳಿಸಿದ ಸ್ವಾತಂತ್ರ್ಯ.

ಕಣ್ಣುಗಳು

ಕಣ್ಣುಗಳು



1. ಸರಾಸರಿ ಒಬ್ಬ ವ್ಯಕ್ತಿ ತನ್ನ ಕಣ್ಣುಗಳನ್ನು ನಿಮಿಷವೊಂದಕ್ಕೆ 12 ಸಲ ಕಣ್ಣು ಮಿಟುಕಿಸುತ್ತಾನೆ.
2. ಮಾನವನ ಕಣ್ಣು 576 ಮೆಗಾಪಿಕ್ಸೆಲ್ ಆಗಿವೆ.
3. ಮಾನವನ ಕಣ್ಣುಗುಡ್ಡೆಗಳು ಅಂದಾಜು 28 ಗ್ರಾಂ,ನಷ್ಟು ತೂಕ ಹೊಂದಿವೆ.
4. ಕಣ್ಣು ತೆರೆದು ಸೀನುವುದು ಸಾಧ್ಯವಿಲ್ಲ.
5. ದಿನವೊಂದಕ್ಕೆ 10,000 ಕ್ಕಿಂತ ಹೆಚ್ಚುಸಲ ಕಣ್ಣು ಮಿಟುಕುತ್ತದೆ.
6. ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.
7. ಕೆಲವು ವ್ಯಕ್ತಿಗಳ ಎರಡು ಕಣ್ಣುಗಳ ಬಣ್ಣವು ಬೇರೆ ಬೇರೆಯಾಗಿರುತ್ತವೆ ಈ ಸ್ಥಿತಿಯನ್ನು Heterochromia iridum ಎನ್ನುತ್ತಾರೆ.
8. ಕಣ್ಣಿನ 'ಕಾರ್ನಿಯಾ' ಎಂಬ ಭಾಗವನ್ನು ಮಾತ್ರ ದಾನ ಮಾಡಲಾಗುತ್ತದೆ.
9. ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನ ಆಚರಿಸಲಾಗುತ್ತದೆ.
10. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು.