Powered By Blogger

ಗುರುವಾರ, ನವೆಂಬರ್ 27, 2014

ಬ್ರಿಕ್ಸ್ ಸಮೂಹ

ಬ್ರಿಕ್ಸ್ ಸಮೂಹ

1. ಬ್ರಿಕ್ಸ್ ಜನ್ಮ ತಾಳಿದ್ದು 2009.
2. ಬ್ರಿಕ್ಸ್ 2011 ಗಿಂತ ಮೊದಲು ಬ್ರಿಕ್ ಎಂದಾಗಿತ್ತು.
3. ದಕ್ಷಿಣ ಆಫ್ರಿಕಾ ಈ ಸಮೂಹಕ್ಕೆ ಸೇರುವ ಮೂಲಕ ಬ್ರಿಕ್ ಬ್ರಿಕ್ಸ್ ಅಂತಾಯಿತು
4. ಇಲ್ಲಿಯವರೆಗೆ ಒಟ್ಟು ಆರು ಬ್ರಿಕ್ಸ್ ಶೃಂಗಸಭೆಗಳು ನಡೆದಿವೆ.
5. ಭಾರತ 20102 ರಲ್ಲಿ ನಡೆದ ನಾಲ್ಕನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಂಡಿತು.
6. ಇತ್ತೀಚಿಗೆ ಬ್ರಿಜಿಲ್ ನಲ್ಲಿ 6ನೇ ಬ್ರಿಕ್ಸ್ ಶೃಂಗಸಭೆ ನಡೆಯಿತು.
7. ಈ ಸಭೆಯಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು.
8. ಈ ಬ್ಯಾಂಕಿನ ಹೆಸರು 'ನ್ಯೂ ಡೆವಲೆಪಮೆಂಟ್ ಬ್ಯಾಂಕ್'.
9. 100 ಶತಕೋಟಿ(6 ಲಕ್ಷ ಕೋಟಿ) ಬಂಡವಾಳದಲ್ಲಿ ಈ ಬ್ಯಾಂಕ್ 2016 ವೇಳೆಗೆ ಕಾರ್ಯಾರಂಭ ಮಾಡಲಿದೆ.
10. ಈ ಬ್ಯಾಂಕಿನ ಕೇಂದ್ರ ಕಛೇರಿ ಚೀನಾದ ಶಾಂಘೈನಲ್ಲಿರಲಿದೆ ಹಾಗೂ ಈ ಬ್ಯಾಂಕಿನ ಅಧ್ಯಕ್ಷತೆಯನ್ನು ಭಾರತಕ್ಕೆ ವಹಿಸಿಕೊಡಲಾಗಿದೆ.
11. ಬ್ರಿಕ್ಸ್ ನ ಸಂಕ್ಷೀಪ್ತ ರೂಪ ಹೀಗಿದೆ

B - ಬ್ರಿಜಿಲ್
R - ರಷ್ಯಾ
I - ಇಂಡಿಯಾ
C - ಚೀನಾ
S - ದಕ್ಷಿಣ ಆಫ್ರಿಕಾ

ಕಾಮನ್‍ವೆಲ್ತ್ ಕ್ರೀಡೆಗಳು

ಕಾಮನ್‍ವೆಲ್ತ್ ಕ್ರೀಡೆಗಳು

  • ಕಾಮನ್‍ವೆಲ್ತ್ ಕ್ರೀಡೆಗಳು ಮೊದಲಿಗೆ 1930 ರಲ್ಲಿ ಪ್ರಾರಂಭವಾದವು.
  • ಕಾಮನ್‍ವೆಲ್ತ್ ಕ್ರೀಡೆಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಜರುಗುತ್ತವೆ.
  • ಕಾಮನ್‍ವೆಲ್ತ್ ಕ್ರೀಡೆಗಳು ಜಗತ್ತಿನಲ್ಲಿ ಒಲಂಪಿಕ್ ಕ್ರೀಡಾಕೂಟ ಮತ್ತು ಏಷಿಯನ್ ಗೇಮ್ಸ್ ಗಳನ್ನು ಹೊರತು ಪಡಿಸಿದರೆ ಮೂರನೆಯ ಅತಿ ದೊಡ್ಡ ಕ್ರೀಡಾ ಕೂಟ.
  • ಕಾಮನ್‍ವೆಲ್ತ್ ಕ್ರೀಡೆಗಳು 'ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್' ಇವರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ.
  • ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ 71 ದೇಶಗಳು ಈ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತವೆ.
  • ಕೇವಲ 6 ರಾಷ್ಟ್ರಗಳು ಮಾತ್ರ ಪ್ರತಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿವೆ.
  • ಭಾರತ ಮೊದಲ ಬಾರಿಗೆ 1934 ರಲ್ಲಿ ಲಂಡನ್ ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಭಾಗವಹಿಸಿತು.
  • 1930 ರಲ್ಲಿ ನಡೆದ ಪ್ರಥಮ ಕಾಮನ್‍ವೆಲ್ತ್ ಕ್ರೀಡಾಕೂಟಗಳಲ್ಲಿ ಕೇವಲ 11 ರಾಷ್ಟ್ರಗಳು ಮಾತ್ರ ಭಾಗವಹಿಸಿದವು.
  • ಆಸ್ಟ್ರೇಲಿಯಾ 5 ಸಲ ಕಾಮನ್‍ವೆಲ್ತ್ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಅತಿಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿದ ಪ್ರಥಮ ರಾಷ್ಟ್ರ ಎನ್ನುವ ಖ್ಯಾತಿಗೆ ಒಳಗಾಗಿದೆ.
  • ಭಾರತವು 2010 ರಲ್ಲಿ 19ನೇ ಕಾಮನ್‍ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತು.
  • 2018 ರ ಕಾಮನ್‍ವೆಲ್ತ್ ಕ್ರೀಡಾಕೂಟಗಳು ಆಸ್ಟ್ರೇಲಿಯಾದಲ್ಲಿ ಜರುಗಲಿವೆ.
  • 1930ರ ಮೊದಲ ಕಾಮನ್‍ವೆಲ್ತ್ ಕ್ರೀಡಾಕೂಟವನ್ನು ಕೆನಡಾ ರಾಷ್ಟ್ರವು ಆಯೋಜಿಸಿತು


The following is the final list of Indian medal winners at the 2014 Commonwealth Games at their conclusion on Sunday.
Gold:
Sanjita Khumukchan: Women's 48 kg weightlifting
Sukhen Dey: Men's 56 kg weightlifting
Abhinav Bindra: Men's 10 metre air rifle shooting
Apurvi Chandela: Women's 10 metre air rifle shooting
Rahi Sarnobat: Women's 25 metre pistol shooting
Satish Sivalingam: Men's 77 kg weightlifting
Jitu Rai: Men's 50 metre pistol shooting
Amit Kumar: Men's freestyle 57 kg wrestling
Vinesh Phogat: Women's freestyle 48 kg wrestling
Sushil Kumar: Men's freestyle 74 kg wrestling
Babita Kumari: Women's freestyle 55 kg wrestling
Yogeshwar Dutt: Men's freestyle 65 kg wrestling
Vikas Gowda: Men's discus throw athletics
Dipika Pallikal and Joshana Chinappa: Women's doubles squash
Parupalli Kashyap: Men's singles badminton



Silver:
Mirabai Chanu Saikhom: Women's 48 kg weightlifting
Shushila Likmabam: Women's 48 kg judo
Navjot Chana: Men's 60 kg judo
Malaika Goel: Women's 10 metre air pistol shooting
Santoshi Matsa: Women's 53 kg weightlifting
Prakash Nanjappa: Men's 10 metre air pistol shooting
Ayonika Paul: Women's 10 metre air rifle shooting
Anisa Sayyed: Women's 25 metre pistol shooting
Shreyasi Singh: Women's double trap shooting
Ravi Katulu: Men's 77 kg weightlifting
Gurpal Singh: Men's 50 metre pistol shooting
Gagan Narang: Men's 50 metre rifle prone shooting
Vikas Thakur: Men's 85 kg weightlifting
Harpreet Singh: Men's 25 metre rapid fire pistol shooting
Sanjeev Rajput: Men's 50 metre rifle 3 positions shooting
Rajeev Tomar: Men's freestyle 125 kg wrestling
Lalita: Women's freestyle 53 kg wrestling
Bajrang: Men's freestyle 61 kg wrestling
Sakshi Malik: Women's freestyle 58 kg wrestling
Satywart Kadian: Men's freestyle 97 kg wrestling
Geetika Jakhar: Women's freestyle 63 kg wrestling
Seema Punia: Women's discus throw athletics
Achanta Sharath Kamal and Anthony Amalraj: Men's doubles table tennis
L. Sarita Devi: Women's 57-60 kg boxing
L. Devendro Singh: Men's 49 kg boxing
Mandeep Jangra: Men's 69 kg boxing
Rajinder Rahelu: Men's heavyweight powerlifting
Vijender Singh: Men's 75 kg boxing
India: Men's hockey
Jwala Gutta and Ashwini Ponnappa: Women's doubles badminton



Bronze:
Ganesh Mali: Men's 56 kg weightlifting
Kalpana Thoudam: Women's 52 kg judo
Swati Singh: Women's 53 kg weightlifting
Rajwinder Kaur: Women's +78 kg judo
Omkar Otari: Men's 69 kg weightlifting
Mohammed Asab: Men's double trap shooting
Punam Yadav: Women's 63 kg weightlifting
Manavjit Sandhu: Men's trap shooting
Gagan Narang: Men's 50 metre rifle 3 positions shooting
Lajja Gauswami: Women's 50 metre rifle 3 positions shooting
Chandrakant Mali: Men's 94 kg weightlifting
Navjot Kaur: Women's freestyle 69 kg wrestling
Dipa Karmakar: Women's vault gymnastics artistic
Pawan Kumar: Men's freestyle 86 kg wrestling
Pinki Jangra: Women's 48-51 kg boxing
Sakina Khatun: Women's lightweight powerlifting
P.V. Sindhu: Women's singles badminton
R.M.V. Gurusaidutt: Men's singles badminton
Arpinder Singh: Men's triple jump athletics

ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ

ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ 

 

  • ಓಲಂಪಿಕ್ಸ್ ಕ್ರೀಡೆಗಳು ಮೊಟ್ಟ ಮೊದಲಿಗೆ ಆರಂಭವಾದದ್ದು 776 ರಲ್ಲಿ ಗ್ರೀಸ್ ದೇಶದ ಅಥೆನ್ಸ ನಗರದಲ್ಲಿ ಜ್ಯೂಸ್ ದೇವತೆಯ ನೆನಪಿಗಾಗಿ ನಡೆದವು. 
  • ಆಧುನಿಕ ಓಲಂಪಿಕ್ಸ್ ನ ಪಿತಾಮಹ ಪ್ರಾನ್ಸ್ ದೇಶದ ಬ್ಯಾರನ್ ಪಿಯರ ಡಿ ಕ್ಯುಬರತೀನ
  • 1894 ರಲ್ಲಿ IOC ಯನ್ನು ರಚಿಸಲಾಯಿತು.(ಸ್ವಿಜರಲ್ಯಾಂಡ್ ದೇಶದ ರಿಪೋಸ್ ಲಾವಾಸನ್ನಿ)
  • ಓಲಂಪಿಕ್ಸ್ ನ ಒಟ್ಟು ಸದಸ್ಯ ರಾಷ್ಟ್ತಗಳು 171
  •  ಆಧುನಿಕ ಓಲಂಪಿಕ್ಸ್ ಕ್ರೀಡೆಗಳು ಗ್ರೀಸ್ ದೇಶದ ಅಥೇನ್ಸ್ ನಗರದಲ್ಲಿ 1896  ರಲ್ಲಿ ಜರುಗಿದವು.
  • ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾಗಿದ್ದು -1924 ರಲ್ಲಿ,
  •  ಭಾರತ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು - 1920 ರಲ್ಲಿ.(6ನೇ ಕ್ರೀಡಾಕೂಟ ಬೆಲ್ಜಿಯಂ ನಲ್ಲಿ)
  • 1912 ರಿಂದ ಮಹಿಳೆಯರು ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸತೊಡಗಿದರು.
  • ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು 1940ರಲ್ಲಿ ಜಪಾನಿನ ಟೋಕಿಯೋದಲ್ಲಿ (12 ನೇ ಕ್ರೀಡಾಕೂಟಗಳು)
  • ಓಲಂಪಿಕ್ಸನ ಧೇಯ :-  ಅತಿ ವೇಗ,ಅತಿ ಎತ್ತರ,ಅತಿ ಬಲ (Citius, Altius, Fortius)
  • 2012 ರ 30 ನೇ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು -ಲಂಡನ್(ಬ್ರಿಟನ್)
  • 2016 ರ 31 ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ರಿಯೊ ಡಿ ಜನೈರೊ(ಬ್ರೆಜಿಲ್) ನಲ್ಲಿ ಜರುಗಲಿವೆ.
  •  2020 32ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ಟೋಕಿಯೋ(ಜಪಾನ) ನಲ್ಲಿ ಜರುಗಲಿವೆ.
  • 2014 ರ 22 ನೇ ಚಳಿಗಾಲದ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು - ಸೋಚಿ(ರಷ್ಯಾ)
  • 2018 ನೇ 23 ಚಳಿಗಾಲದ ಕ್ರೀಡಾಕೂಟಗಳು - ಪಿಯಾಂಗಚಾಂಗ್ (ದಕ್ಷಿಣ ಕೊರಿಯಾ) ಜರುಗಲಿವೆ.
  •   ಓಲಂಪಿಕ್ಸ್ ಧ್ವಜದಲ್ಲಿರುವ ಬಣ್ಣಗಳು - 05 
         ಆ 05 ಬಣ್ಣಗಳು ಸೂಚಿಸುವ ಖಂಡಗಳು
  • ನೀಲಿ    -  ಯೂರೋಪ
  • ಕೆಂಪು  -  ಅಮೆರಿಕ
  • ಕಪ್ಪು    -  ಆಫ್ರಿಕಾ
  • ಹಳದಿ   -  ಏಷ್ಯಾ
  • ಹಸಿರು  -  ಆಸ್ಟ್ರೇಲಿಯಾ
ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತೀಯರು
  • ನಾರ್ಮನ್ ಪ್ರಿಚರ್ಡ್ :-  ಅನಿವಾಸಿ ಭಾರತೀಯ 1900 ರ ಲಿ ಪ್ಯಾರಿಸ್ ಕ್ರೀಡಾಕೂಟಗಳಲ್ಲಿ 200 ಮೀ ಓಟದಲ್ಲಿ   2 ಬೆಳ್ಳಿಯ ಪದಕ ವಿಜಯಿಸಿದ್ದಾರೆ
  • ಕೆ.ಡಿ.ಜಾಧವ :- 1952 ಹೆಲಿಂಕ್ಸಿ(ಫೀನಲ್ಯಾಂಡ್) ನಡೆದ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದ್ದರು. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು (ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ ಮೊದಲ ಭಾರತೀಯ)
  • ಲಿಯಾಂಡರ್ ಪೇಸ್ :- 1996 ಅಮೆರಿಕದ ಅಟ್ಲಾಂಟದಲ್ಲಿ ಜರುಗಿದ 26 ನೇ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಕಂಚಿನ ಪದಕ ವಿಜಯಿಸಿದರು. 
  • ಕರ್ಣಂ ಮಲ್ಲೇಶ್ವರಿ :- 2000 ರ ಆಸ್ಟ್ರೇಲಿಯಾದಲ್ಲಿ ಜರುಗಿದ 27 ನೇ ಕ್ರೀಡಾಕೂಟದಲ್ಲಿ 69 ಕೆ,ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜಯಿಸಿದರು(ಪದಕ ಗೆದ್ದ ಭಾರತದ ಮೊದಲ ಮಹಿಳೆ)
  • ರಾಜವರ್ಧನ್ ಸಿಂಗ್ ರಾಠೋಡ್ :- 2004 ರ ಗ್ರೀಸ್ ದೇಶದ ಅಥೇನ್ಸ್ ನಲ್ಲಿ ಜರುಗಿದ 28 ನೇ ಕ್ರೀಡಾಕೂಟಗಳಲ್ಲಿ  ಬೆಳ್ಳಿಯ ಪದಕ ಜಯಿಸಿದರು.
2008 ರ ಚೀನಾದ ಬೀಜೀಂಗ್ ನಲ್ಲಿ ಜರುಗಿದ 29 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು 
  • ಅಭಿನವ ಬಿಂದ್ರಾ :-ಶೂಟಿಂಗನಲ್ಲಿ ಚಿನ್ನದ ಪದಕ(ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯ)
  • ಸುಶೀಲಕುಮಾರ :-  ಕುಸ್ತಿಯಲ್ಲಿ ಕಂಚಿನ ಪದಕ.
  • ವಿಜೇಂದರ ಕುಮಾರ :- ಬಾಕ್ಸಿಂಗ್ ನಲ್ಲಿ ಕಂಚಿನ ಪದಕ.
2012 ಬ್ರಿಟನ್ ನ ಲಂಡನ್ ನಲ್ಲಿ ಜರುಗಿದ 30 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು
  • ಸೈನಾ ನೆಹ್ವಾಲ್  :- ಬ್ಯಾಡ್ಮೀಂಟನ್ ನಲ್ಲಿ ಕಂಚು
  • ಮೇರಿಕೋಮ್ : -    ಬಾಕ್ಸಿಂಗ್ ನಲ್ಲಿ ಕಂಚು
  • ಸುಶಿಲಕುಮಾರ:-    ಕುಸ್ತಿಯಲ್ಲಿ ಬೆಳ್ಳಿ
  • ವಿಜಯಕುಮಾರ :-  ರ್ಯಾಪಿಡ್ ಫೈರ್ ಬೆಳ್ಳಿ ಪದಕ
  • ಗಗನ ನಾರಂಗ್ :-   10 ಮೀಟರ್ ಫೈರಿಂಗ್ ನಲ್ಲಿ ಕಂಚು
  • ಯೋಗೇಶ್ವರ ದತ್ತ :- ಕುಸ್ತಿಯಲ್ಲಿ ಕಂಚು.

















                    ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತದ ಹಾಕಿ ತಂಡದ ಸಾಧನೆ
  • ಭಾರತ ಹಾಕಿ ತಂಡ 08 ಚಿನ್ನದ ಪದಕ ಹಾಗೂ 01 ಬೆಳ್ಳಿಯ ಪದಕ ಹಾಗೂ 02 ಕಂಚಿನ ಪದಕ ಸೇರಿದಂತೆ ಒಟ್ಟು 11 ಪದಕಗಳನ್ನು ಜಯಿಸಿದೆ.
  • ಭಾರತ ಹಾಕಿ ತಂಡ ಕೊನೆಯ ಚಿನ್ನದ ಪದಕ ಗೆದ್ದಿದ್ದು 1980 ರಲ್ಲಿ ಮಾಸ್ಕೋದಲ್ಲಿ
  • ಭಾರತ ಒಟ್ಟು 02 ಸಲ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದೆ.
  • ಅವುಗಳೆಂದರೆ :- 
  1. 1928 ರ ಆ್ಯಮಸ್ಟರ್ ಡ್ಯಾಮ(ನೆದರಲೆಂಡ್)
  2. 1932 ರ ಲಾಸ್ ಎಂಜಲೀಸ್(ಅಮೆರಿಕಾ)
  3. 1936 ರ ಬರ್ಲಿನ್ (ಜರ್ಮನಿ)
  4. 1948 ರ ಲಂಡನ್
  5. 1952 ಹೆಲಿಂಕ್ಸಿ
  6. 1956 ಮೆಲ್ಬೋರ್ನ,

ಬುಧವಾರ, ನವೆಂಬರ್ 26, 2014

◆◆ ಸಂವಿಧಾನ ಸಮರ್ಪಣಾ ದಿನ ◆◆

◆◆ ಸಂವಿಧಾನ ಸಮರ್ಪಣಾ ದಿನ ◆◆



  • ನವೆಂಬರ್ 26 1949, ರಂದು ಸಂವಿಧಾನ ರಚನಾ ಕಾರ್ಯ ಪೂರ್ಣಗೊಂಡು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಲಾಯಿತು. ಆದರೆ ಸಂವಿಧಾನ ವಿಧಿವತ್ತಾಗಿ ಜಾರಿಗೆ ಬಂದಿದ್ದು ಜನೆವರಿ 26,1950 ರಂದು. ಸಂವಿಧಾನ ದೇಶಕ್ಕೆ ಸಮರ್ಪಿಸಿ ಇಂದಿಗೆ 65 ವರ್ಷಗಳು ಸಂದಿವೆ.
  • ಸಂವಿಧಾನ ರಚನಾ ಕಾರ್ಯ 1949 ನವೆಂಬರ್ 26 ಕ್ಕೆ ಪೂರ್ಣಗೊಂಡರು ಸಹ ಅದನ್ನು 1950 ಜನೆವರಿ 26, ರಂದು ಜಾರಿಗೆ ತರಲು ಒಂದು ಪ್ರಮುಖ ಕಾರಣವೆನೆಂದರೆ, 1930 ರ ಕಾಂಗ್ರೆಸ್ಸ್ ಅಧಿವೇಶನ ಲಾಹೋರಿನಲ್ಲಿ ಜರುಗಿತು. ಇದರ ಅಧ್ಯಕ್ಷತೆಯನ್ನು ಜವಾಹರಲಾಲ್ ನೆಹರೂರವರು ವಹಿಸಿಕೊಂಡಿದ್ದರು. ಈ ಲಾಹೋರಿನ ಅಧಿವೇಶನದಲ್ಲಿ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ(ಪೂರ್ಣ ಸ್ವರಾಜ್ಯ) ಪಡೆಯುವ ನಿರ್ಧಾರ ಕೈಗೊಳ್ಳಲಾಯಿತು ಹಾಗೆಯೇ ಜನೆವರಿ 26 ರಂದು ಸ್ವತಂತ್ರ ದಿನವನ್ನಾಗಿ ಆಚರಿಲಾಯಿತು.ಲಾಹೋರಿನ ರಾವಿ ನದಿ ದಂಡೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಆ ಕಾರಣಕ್ಕಾಗಿಯೇ ಸಂವಿಧಾನವನ್ನು 26 ಜನೆವರಿಯಂದು ಜಾರಿಗೆ ತರಲಾಯಿತು, ಅಲ್ಲದೇ ಆ ಕಾರಣಕ್ಕಾಗಿಯೇ ದೇಶದಾದ್ಯಂತ 26 ಜನೆವರಿಯನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.

ಮಂಗಳವಾರ, ನವೆಂಬರ್ 25, 2014

ಭಾರತ ರತ್ನ ಪ್ರಶಸ್ತಿ.

ಭಾರತ ರತ್ನ ಪ್ರಶಸ್ತಿ



  • ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ.
  • ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. 
  •  ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಗಾಂಧೀಜಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು.
  • ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
  • ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ.
  • ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ 1990 ರಲ್ಲಿ ಮತ್ತು ಖಾನ್ ಅಬ್ದುಲ್ ಗಫರ್ ಖಾನ್. 1987 ರಲ್ಲಿ.
  • ಮದರ್ ಥೆರೆಸಾರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಿ 1980 ರಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
  • ಇಲ್ಲಿಯವರೆಗೆ 2013 ವರೆಗೆ 43 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
  • ಮೊದಲ ಪ್ರಶಸ್ತಿ ವಿಜೇತ ವಿದೇಶಿ ವ್ಯಕ್ತಿ ಖಾನ್ ಅಬ್ದುಲ್ ಗಫರ್ ಖಾನ್ 1987 ರಲ್ಲಿ. (ಪಾಕಿಸ್ತಾನದ ಪ್ರಜೆ, ಭಾರತ ಸ್ವತಂತ್ರ ಪಡೆಯುವ ಮುಂಚೆ ಭಾರತೀಯ ಪ್ರಜೆಯಾಗಿದ್ದ.
  • ಭಾರತ ರತ್ನ  ಪ್ರಶಸ್ತಿ  ಏಕೈಕ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾ.1992 ರಲ್ಲಿ.
  • ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಕಿರಿಯ ವ್ಯಕ್ತಿ ಸಚಿನ ತೆಂಡೂಲ್ಕರ್ (43 ನೇ ವಯಸ್ಸಿನಲ್ಲಿ 2013 ರಲ್ಲಿ)
  • ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಗುಲ್ಜಾರಿಲಾಲ್ ನಂದಾ (99 ನೇ ವಯಸ್ಸಿನಲ್ಲಿ 1997 ರಲ್ಲಿ)
  • ಭಾರತ ರತ್ನ ಪ್ರಶಸ್ತಿ ವಿಜೇತ ಕರ್ನಾಟಕದವರು ಸರ್,ಎಮ್,ವಿಶ್ವೇಶ್ವರಯ್ಯ (1955), ಭೀಮಶೇನ ಜೋಷಿ (2008), ಸಿ,ಎನ್,ರಾವ್ (2013)
  • ಪ್ರಶಸ್ತಿ ವಿಜೇತ ಮೊದಲ ಮಹಿಳೆ ಇಂದಿರಾಗಾಂಧಿ (1971)
  • ಭಾರತದ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಮುರಾರ್ಜಿ ದೇಸಾಯಿ, (1991 ರಲ್ಲಿ ಪ್ರಶಸ್ತಿ ವಿಜೇತರಾದರು)
  • ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನಿಗಳು ಜವಾಹರ್ ಲಾಲ್ ನೆಹರೂ (1955) ಇಂದಿರಾ ಗಾಂಧಿ (1971) ರಾಜೀವ ಗಾಂಧಿ (1991) ಮೊರಾರ್ಜಿ ದೇಸಾಯಿ (1991) ಗುಲ್ಜಾರಿಲಾಲ್ ನಂದಾ (1997)
  • ಪ್ರಶಸ್ತಿ ವಿಜೇತ ರಾಷ್ಟ್ರಪತಿಗಳು :- ಸರ್ವಪಳ್ಳಿ ರಾದಾಕೃಷ್ಣನ್(1954)  ಬಾಬು ರಾಜೇಂದ್ರ ಪ್ರಸಾದ (1962) ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
  • ಪ್ರಶಸ್ತಿ ಪಡೆದು ರಾಷ್ಟ್ರಪತಿಯಾದವರು :-  ಸರ್ವಪಳ್ಳಿ ರಾದಾಕೃಷ್ಣನ್(1954)
    ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
  • ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಪಡೆದವರು :- ಡಾ. ಚಂದ್ರಶೇಖರ್ ವೆಂಕಟರಾಮನ್,  ಮದರ್ ತೆರೆಸಾ, ಅಮರ್ತ್ಯ ಸೇನ್. 
  • ಪ್ರಶಸ್ತಿ ಪಡೆದ ಮೊದಲ ನಟ :-ಜಿ ರಾಮಚಂದ್ರನ್  
  • 2014 ರಲ್ಲಿ ಪ್ರಶಸ್ತಿ ವಿಜೇತರು :- ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ ಮೋಹನ್ ಮಾಳವಿಯ(ಮರೋಣತ್ತರವಾಗಿ)
  • ಪ್ರಶಸ್ತಿ ವಿಜೇತರಿಗೆ ದೊರೆಯುವ ಸೌಲಭ್ಯಗಳು



ಶುಕ್ರವಾರ, ನವೆಂಬರ್ 21, 2014

ಭಾರತದ ವಿಶ್ವ ಪರಂಪರೆಯ ತಾಣಗಳು

ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಅಸ್ಸಾಂ

ಬಿಹಾರ

ದೆಹಲಿ

ಗೋವಾ

ಗುಜರಾತ್

ಕರ್ನಾಟಕ

ಮಧ್ಯಪ್ರದೇಶ

ಮಹಾರಾಷ್ಟ್ರ

ಒರಿಸ್ಸಾ

ರಾಜಸ್ಥಾನ

ತಮಿಳುನಾಡು

ಉತ್ತರ ಪ್ರದೇಶ

ಉತ್ತರಾಖಂಡ

ಪಶ್ಚಿಮ ಬಂಗಾಳ

ಹಿಮಾಚಲ ಪ್ರದೇಶ

 

ಗುರುವಾರ, ನವೆಂಬರ್ 20, 2014

ವಿವಿಧ ರಾಷ್ಟ್ರಗಳು ಹಾಗೂ ಸಂಸತ್ತು


ದೇಶ                                 ಸಂಸತ್ತು

Afghanistan Shora
Australia Parliament
Bangladesh Jatia Parliament
Bhutan Tasongadu
Canada Parliament
China National People Congress
Denmark Folketing
Egypt People's Assembly
France Parlement
Germany Bundestag
Great Britain Parliament
Hungary Országgyűlés
Iceland Althing
India Sansad
Iran Majilis
Ireland Oireachtas
Israel The Knesset
Italy Parlamento Italiano
Japan Diet
Kuwait Majlis-al-Umma
Lativa Saeima
Malaysia Majilis
Maldives Majilis
Magnolia Khural
Nepal Rashtriya Panchayat
Netherlands States General (Staten-Generaal)
Norway Storting
Oman Majlis
Pakistan Majlis-e-Shoora
Poland Scym
Russia Duma
Spain Crotes
Sweden Riksdag
South Africa Parliament
Switzerland Federal Assembly
Taiwan Yuan
Turkey Grand National Assembly
USA Congress
Uzbekistan Oliy Majlis

ಹೊಯ್ಸಳರು

ಹೊಯ್ಸಳರು

ಪ್ರಸ್ತಾವನೆ

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, 'ಹೊಯ್ಸಳ' ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). 

ಹೊಯ್ಸಳ ಅರಸ
 ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ/ಬಿಟ್ಟಿದೇವ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದ ದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆ ಯ ಅತ್ಯುನ್ನತ ಉದಾಹರಣೆಗಳು ಮೂಡಿ ಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. ಹೊಯ್ಸಳ ಶಿಲ್ಪ ಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆ ಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ. ವೀರ ಬಲ್ಲಾಳನ (ಆಡಳಿತ: ೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠವಾದುದೆಂದು ಹೆಸರಾಯಿತು. ನಂತರದ ದಶಕಗಳಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನರುಗಳೊಂದಿಗೆ ಪೈಪೋಟಿಗೆ ಸಿಲುಕಿತು. ಅಂತಿಮವಾಗಿ ಹೊಯ್ಸಳ ವಂಶದ ಆಡಳಿತ ಕ್ರಿ.ಶ. ೧೩೪೬ ರಲ್ಲಿ ಕೊನೆಗೊಂಡಿತು.

ಇತಿಹಾಸ
 ದಂತಕತೆಯ ಪ್ರಕಾರ ಜೈನ ಗುರು ಸುದತ್ತಚಾರ್ಯನು ಸೊಸೆಯೂರಿನ ವಾಸಂತಿಕಾ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ನಾಪಿಸಿದನು. ಇದೆ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ. ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ. ೧೦೭೮ ಮತ್ತು ೧೭೯೦ರ ಶಾಸನಗಳು ಹೊಯ್ಸಳರನ್ನು ಯಾದವ ವಂಶದವರು ಎಂದು ಸಂಬೋಧಿಸಿವೆ. ಆದರೆ ಹೊಯ್ಸಳರಿಗೂ ಉತ್ತರದ ಯಾದವರಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲ. ಹೊಯ್ಸಲರು ಹಾಲುಮತಕ್ಕೆ(ಕುರುಬ ಗೌಡ ಸಮಾಜ)ಸರಿದವರು ಎಂದು ಕೆಲವರು ವಾದಿಸುತಾರೆ.

ಹೊಯ್ಸಳ ವಂಶವೃಕ್ಷ

  • ಸಳ
  • ಎರಡನೆಯ ನೃಪಕಾಮ
  • ಎರಡನೆಯ ವಿನಯಾದಿತ್ಯ
  • ಎರೆಯಂಗ
  • ಒಂದನೆಯ ಬಲ್ಲಾಳ
  • ವಿಷ್ಣುವರ್ಧನ
  • ಉದಯಾದಿತ್ಯ
  • ಕುಮಾರಬಲ್ಲಾಳ
  • ಒಂದನೆಯ ನರಸಿಂಹ
  • ವಿಜಯನಾರಾಯಣ ಏಚಲದೇವಿ
  • ಎರಡನೆಯ ಬಲ್ಲಾಳ
  • ಎಱೆಯಂಗದೇವ
  • ಎರಡನೆಯ ನರಸಿಂಹ
  • ಎರಡನೆಯ ನರಸಿಂಹ
  • ಮೂರನೆಯ ನರಸಿಂಹ
  • ರಾಮನಾಥ
  • ಮೂರನೆಯ ಬಲ್ಲಾಳ
  • ವಿರೂಪಾಕ್ಷ (ನಾಲ್ಕನೆಯ ಬಲ್ಲಾಳ) 

ಅರ್ಥವ್ಯವಸ್ಥೆ

ಹೊಯ್ಸಳ ಆಡಳಿತದ ಮುಖ್ಯ ಆದಾಯ ಮೂಲ ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿತ್ತು. ತಮಗೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರಾಜರುಗಳು ಜಮೀನುಗಳನ್ನು ಜಹಗೀರು ನೀಡುತ್ತಿದ್ದರು. ಈ ಜಹಗೀರದಾರರು ಆ ಜಮೀನಿನ ಒಕ್ಕಲುಗಳು ಉತ್ಪಾದಿಸಿದ ಕೃಷಿ ಮತ್ತು ವನೋತ್ಪನ್ನಗಳ ಒಡೆತನ ಗಳಿಸಿಕೊಳ್ಳುತ್ತಿದ್ದರು. ಈ ಜಮೀನುದಾರರಲ್ಲಿ ಎರಡು ವಿಧಗಳಿದ್ದವು. ಪ್ರಜಾ ಗವುಂಡರು ಅಂತಸ್ತಿನಲ್ಲಿ , ಧನಾಡ್ಯ ಪ್ರಭು ಗವುಂಡರಿಗಿಂತ ಕೆಳಗಿದ್ದರು. ಮಲೆನಾಡು ಪ್ರದೇಶದಲ್ಲಿ , ಸೂಕ್ತ ಹವಾಮಾನದ ಕಾರಣ, ಪಶುಪಾಲನೆ, ತೋಟಗಾರಿಕೆ ಮತ್ತು ಸಾಂಬಾರ ಪದಾರ್ಥಗಳ ಕೃಷಿ ನಡೆಯುತ್ತಿತ್ತು. ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು. ಸ್ಥಳೀಯರ ಖರ್ಚಿನಲ್ಲಿ ಕಟ್ಟಿ , ದುರಸ್ತಿ ಮಾಡಲಾಗುತ್ತಿದ್ದ ಕೆರೆ ಕಟ್ಟೆಗಳು, ಕಾಲುವೆಗಳು , ಬಾವಿಗಳು ಇವುಗಳ ಮೇಲೆ ಹೊಯ್ಸಳ ರಾಜರು ಸುಂಕ ವಿಧಿಸಿದ್ದರು. ದೊಡ್ಡ ನೀರಾವರಿಗೆ ವಿಷ್ಣುಸಾಗರ,ಶಾಂತಿಸಾಗರ, ಬಲ್ಲಾಳರಾಯಸಾಗರ ಇತ್ಯಾದಿ ಕೆರೆಗಳನ್ನು ರಾಜ್ಯದ ಖರ್ಚಿನಲ್ಲಿ ಕಟ್ಟಿಸಲಾಗಿತ್ತು.
ಪಶ್ಚಿಮ ಕರಾವಳಿಯಲ್ಲಿ , ಜನಸಾಮಾನ್ಯರ ಪ್ರಯಾಣಕ್ಕೆ ಮತ್ತು ಅಶ್ವಸೇನೆಗಳಿಗೆ , ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುವುದು ದೊಡ್ಡ ವ್ಯಾಪಾರೋದ್ಯಮವಾಗಿತ್ತು. ಕಾಡುಗಳಲ್ಲಿನ ಬೆಲೆಬಾಳುವ ತೇಗವೇ ಮೊದಲಾದ ಮರಗಳ ನಾಟಾ ತಯಾರಿಸಿ , ಇಂದಿನ ಕೇರಳದಲ್ಲಿದ್ದ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿತ್ತು. ಚೀನಾದಲ್ಲಿ ದೊರೆತ ಶುಂಗ ಸಾಮ್ರಾಜ್ಯದ ದಾಖಲೆಗಳ ಪ್ರಕಾರ, ಉತ್ತರ ಚೀನಾದಲ್ಲಿ ಭಾರತದ ವ್ಯಾಪಾರಿಗಳು ಕಾಣಸಿಗುತ್ತಿದ್ದು , ಇದು ಸಮುದ್ರದಾಚೆಯ ಪ್ರದೇಶಗಳೊಂದಿಗೆ ಸಕ್ರಿಯ ವ್ಯಾಪಾರ ಸಂಪರ್ಕವಿದ್ದುದನ್ನು ಸೂಚಿಸುತ್ತದೆ. ದಕ್ಷಿಣ ಭಾರತದಿಂದ ಜವಳಿ, ಸಾಂಬಾರ ಪದಾರ್ಥಗಳು, ಔಷದೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು, ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳು ಚೀನಾ, ಧೋಫರ್, ಏಡನ್ ಮತ್ತು ಸಿರಾಫ್ ( ಈಜಿಪ್ಟ್, ಅರೇಬಿಯಾ ಮತ್ತು ಪರ್ಶಿಯಾ ದೇಶಗಳಿಗೆ ಹೋಗಲು ಪ್ರವೇಶಬಂದರು)ಗಳಿಗೆ ರಫ್ತಾಗುತ್ತಿತ್ತು. ವಾಸ್ತುತಜ್ಞರು (ವಿಶ್ವಕರ್ಮರು), ಶಿಲ್ಪಿಗಳು, ಕಲ್ಲು ಕಡೆಯುವವರು, ಚಿನಿವಾರರು ಇತ್ಯಾದಿ ದೇವಾಳಯಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕುಶಲಕರ್ಮಿಗಳು, ಬಿರುಸಿನಿಂದ ನಡೆಯುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯದಿಂದ , ಸಾಕ್ಡು ಸ್ಥಿತಿವಂತರಾಗಿದ್ದರು.
ನೆಲಗಂದಾಯವನ್ನು ಒಟ್ಟುಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದಾಗಿತ್ತು. ಸಿದ್ಧಾಯ ಎಂದು ಕರೆಯಲಾಗುತ್ತಿದ್ದ ನೆಲಗಂದಾಯದಲ್ಲಿ ಕುಲ ಎಂಬ ಮೂಲತಃ ಬೆಲೆಕಟ್ಟಿದ್ದಲ್ಲದೇ, ವಿವಧ ಮೇಲುಗಂದಾಯವೂ ಅಡಕವಾಗಿತ್ತು. ವಿವಿಧ ವ್ಯವಸಾಯಗಳು, ವಿವಾಹಗಳು, ಗಾಡಿ ಅಥವಾ ರಥಗಳ ಮೇಲೆ ಒಯ್ಯಲಾಗುತ್ತಿದ್ದ ಸರಕುಗಳು, ಸಾಕುಪ್ರಾಣಿಗಳು ಇವೆಲ್ಲದರ ಮೇಲೂ ಸುಂಕ ಹೇರಲಾಗಿತ್ತು. ಬಂಗಾರ, ರತ್ನಗಳು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಹಗ್ಗಗಳು, ನಾರು, ಮನೆ, ಕುಲುಮೆ, ಅಂಗಡಿ, ಪಶುಮಂದೆಗಳು, ಕಬ್ಬಿನ ಗಾಣಗಳು ಇಂಥಾ ಪದಾರ್ಥಗಳಲ್ಲದೆ ಕರಿಮೆಣಸು, ವೀಳ್ಯದೆಲೆ, ತುಪ್ಪ, ಭತ್ತ,ಸಾಂಬಾರ ದಿನಸಿಗಳು, ತಾಳೆಗರಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ಕೃಷ್ಯುತ್ಪನ್ನಗಳ ಮೇಲೂ ಸುಂಕ ವಸೂಲಿ ಮಾಡಿದ ಹಳ್ಳಿ ದಾಖಲೆಗಳು ದೊರೆಯುತ್ತವೆ. ಕೆರಗಳ ನಿರ್ಮಾಣ ಮೊದಲಾದ ನಿರ್ದಿಷ್ಟ ಕೆಲಸಗಳಿಗಾಗಿ ಗ್ರಾಮ ಪಂಚಾಯತಿಗೆ ಸುಂಕ ವಿಧಿಸುವ ಹಕ್ಕಿತ್ತು.

ಧರ್ಮ

 ರಾಮಾನುಜಾಚಾರ್ಯ, ಬಸವಣ್ಣ, ಮಧ್ವಾಚಾರ್ಯ ೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ ವೀರಶೈವ ಮತ್ತು ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ ಜೈನಧರ್ಮದಲ್ಲಿ ಆಸಕ್ತಿ ಇಳಿಮುಖವಾಯಿತು. ಕಂಬದಹಳ್ಳಿ ಮತ್ತು ಶ್ರವಣಬೆಳಗೊಳ ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ ಆದಿ ಶಂಕರರ ಅದ್ವೈತ ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ ಬೌದ್ಧಧರ್ಮದ ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ. ಬಸವಣ್ಣ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರಿಂದ ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು.
ವೀರಶೈವ ಮತದ ಉಗಮ ಚರ್ಚಾಸ್ಪದವಾಗಿದ್ದರೂ, ೧೨ನೆಯ ಶತಮಾನದಲ್ಲಿ ಬಸವಣ್ಣನವರ ಆಗಮನದೊಂದಿಗೆ ಇದು ಪ್ರವರ್ಧಮಾನಕ್ಕೆ ಬಂದಿತು. ಬಸವಣ್ಣಮತ್ತು ಇತರ ವೀರಶೈವ ಶರಣರು ಜಾತಿರಹಿತ ಸಮಾಜವನ್ನು ಪ್ರತಿಪಾದಿಸಿದರು. "ಕಾಯಕವೇ ಕೈಲಾಸ" ಎಂದು ಬೋಧಿಸಿದ ಬಸವಣ್ಣನವರು ಸರಳರೀತಿಯಲ್ಲಿ ವಚನಗಳನ್ನು ಜನಸಾಮಾನ್ಯರಿಗಾಗಿ ಬರೆದರು. ಆದಿ ಶಂಕರರ ಬೋಧನೆಗಳನ್ನು ಒಪ್ಪದ ಮಧ್ವಾಚಾರ್ಯರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ ಮಧ್ವಾಚಾರ್ಯರು ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ ರಾಮಾನುಜಾಚಾರ್ಯರು ಭಕ್ತಿ ಮಾರ್ಗವನ್ನು ಬೋಧಿಸಿ, ಆದಿ ಶಂಕರರ ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು.
ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು ಆಧರಿಸಿ ಮುಂದಿನ ಶತಮಾನಗಳಲ್ಲಿ ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ ರಾಮಾನುಜಾಚಾರ್ಯರರಾಮಾನುಜಾಚಾಯ್ ವಿಗ್ರಹವಿದೆ.ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು ರಾಮಾನುಜಾಚಾರ್ಯರ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು. ಜೈನಧರ್ಮದಿಂದ ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು. ಮಧ್ವಾಚಾರ್ಯರ ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು ಮಧ್ವಾಚಾರ್ಯರ ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ ಗುಜರಾತಿನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ ಮಾರ್ಗದ ಅಲೆ ೧೭-೧೮ನೆಯ ಶತಮಾನದಲ್ಲಿ ಬಂದಿತು.


 

ಸಾಹಿತ್ಯ

ಹೊಯ್ಸಳ ಸಾಮ್ರಾಜ್ಯದ ಆಶ್ರಯದಲ್ಲಿದ್ದ ಕನ್ನಡ ಕವಿಗಳು ಮತ್ತು ಬರಹಗಾರರು
(೧೧೦೦-೧೩೪೩ ಕ್ರಿ.ಶ)
ನಾಗಚಂದ್ರ 1105
ಕಾಂತಿ 1108
ರಾಜಾದಿತ್ಯ 12th. c
ಹರಿಹರ 1160–1200
ಉದಯಾದಿತ್ಯ 1150
ವೃತ್ತ ವಿಲಾಸ 1160
ಕೆರೆಯ ಪದ್ಮರಸ 1165
ನೇಮಿಚಂದ್ರ 1170
ಸುಮನೋಬನ 1175
ರುದ್ರಭಟ್ಟ 1180
ಅಗ್ಗಳ 1189
ಪಾಲ್ಕುರಿಕಿ ಸೋಮನಾಥ 1195
ಸುಜನೋತ್ತಮ್ಸ(ಬೋಪಣ್ಣ) 1180
ಕವಿ ಕಾಮ 12th c.
ದೇವಕವಿ 1200
ರಾಘವಾಂಕ 1200–1225
ಭಂದುವರ್ಮ 1200
ಪಾರ್ಶ್ವ ಪಂಡಿತ 1205
ಮಘನಂದ್ಯಾಚಾರ್ಯ 1209
ಜನ್ನ 1209–1230
ಪುಲಿಗೆರೆ ಸೋಮನಾಥ 13th c.
ಹಸ್ತಿಮಲ್ಲ 13th c.
ಸೋಮರಾಜ 1222
ಗುಣವರ್ಮ 1235
ಪೊಳಲ್‍ವದಂದನಾಥ 1224
ಆಂಡಯ್ಯ 1217–1235
ಸಿಸುಮಾಯಣ 1232
ಮಲ್ಲಿಕಾರ್ಜುನ 1245
ನರಹರಿ ತೀರ್ಥ 1281
ಕುಮಾರ ಪದ್ಮರಸ 13th c.
ಮಹಾಬಲ ಕವಿ 1254
ಕೇಶಿರಾಜ 1260
ಕುಮುದೇಂದು 1275
ರಟ್ಟ ಕವಿ 1300
ನಾಗರಾಜ 1331
ಹೊಯ್ಸಳ ಆಡಳಿತದ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಜನಪ್ರಿಯವಾಗಿದ್ದರೂ, ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. ೧೨ನೆಯ ಶಶತಮಾನದಲ್ಲಿ ಕೆಲ ಸಾಹಿತ್ಯ ಕೃತಿಗಳು ಚಂಪೂ ಶೈಲಿಯಲ್ಲಿ ಬರೆಯಲ್ಪಟ್ಟರೂ , ಇತರ ವಿಶಿಷ್ಟ ಶೈಲಿಗಳೂ ಜನಪ್ರಿಯವಾಗಿದ್ದವು. ಸಾಂಗತ್ಯ, ಷಟ್ಪದಿ, ತ್ರಿಪದಿ ಮತ್ತು ರಗಳೆ ಶೈಲಿಗಳು ಆಧುನಿಕವೆನಿಸಿದ್ದವು. ತೀರ್ಥಂಕರರ (ಜೈನ ಮುನಿಗಳು)ಮಹಿಮೆಯನ್ನು ಎತ್ತಿಹಿಡಿಯುವುದನ್ನು ಜೈನ ಕೃತಿಗಳು ಮುಂದುವರಿಸಿದವು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ ಜನ್ನ,ರುದ್ರಭಟ್ಟ,ನಾಗಚಂದ್ರ,ಹರಿಹರ ಮತ್ತು ,ಅವನ ಸೋದರಸಂಬಂಧಿ, ರಾಘವಾಂಕ ಇವರೆಲ್ಲರಿಗೂ ಹೊಯ್ಸಳ ರಾಜಾಸ್ಥಾನವು ಆಶ್ರಯವಿತ್ತು ಪ್ರೋತ್ಸಾಹಿಸಿತು. ೧೨೦೯ರಲ್ಲಿ ಜೈನ ಕವಿ ಜನ್ನನು ಯಶೋಧರಚರಿತೆ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದನು. ಊರ ದೇವರು ಮಾರಿಗೆ ಇಬ್ಬರು ಬಾಲಕರನ್ನು ಬಲಿಕೊಡಲು ಹೊರಟ ರಾಜನೊಬ್ಬನ ಕಥೆಯಿದು. ಆ ಬಾಲಕರ ಮೇಲೆ ಕನಿಕರ ಬಂದು , ರಾಜನು ಅವರಿಬ್ಬರನ್ನೂ ಬಿಡುಗಡೆ ಮಾಡಿ , ನರಬಲಿಯ ಪದ್ಧತಿಗೆ ವಿದಾಯ ಹೇಳುತ್ತಾನೆ. ಈ ಕೃತಿಗಾಗಿ ಹೊಯ್ಸಳ ರಾಜ ವೀರಬಲ್ಲಾಳನಿಂದ ಜನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಯಿತು.
ಎರಡನೆಯ ವೀರಬಲ್ಲಾಳನ ಆಸ್ಥಾನದಲ್ಲಿಯ ಮಂತ್ರಿ ಚಂದ್ರಮೌಳಿಯ ಆಶ್ರಯದಲ್ಲಿದ್ದ ಸ್ಮಾರ್ಥ ಬ್ರಾಹ್ಮಣ ರುದ್ರಭಟ್ಟನು ಹೆಸರಾಂತ ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವನು. ಆತನ ಪ್ರಸಿದ್ಧ ಚಂಪೂ ಶೈಲಿಯ ಜಗನ್ನಾಥ ವಿಜಯ ಕೃತಿಯು ವಿಷ್ಣು ಪುರಾಣ ಆಧಾರಿತವಾಗಿದ್ದು ಇದರ ಕಥಾವಸ್ತು ಶ್ರೀಕ್ರಷ್ಣನಿಂದ ಬಾಣಾಸುರನ ಸಂಹಾರ.
ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ ವೀರಶೈವ ಕವಿ ಹರಿಹರ , (ಹರೀಶ್ವರ ಎಂದೂ ಕರೆಯುವುದುಂಟು ) ಹಳೆಯ ಜೈನ ಚಂಪೂ ಶೈಲಿಯಲ್ಲಿ ಗಿರಿಜಾಕಲ್ಯಾಣ ಕೃತಿಯನ್ನು ರಚಿಸಿದನು. ಹತ್ತು ಭಾಗಗಳಿರುವ ಇದರ ಕಥಾವಸ್ತು ಶಿವ ಪಾರ್ವತಿಯರ ಪರಿಣಯ. ವಚನ ಸಾಹಿತ್ಯ ಪರಂಪರೆಯ ಭಾಗವಾಗಿರದಿದ್ದ ಮೊದಮೊದಲ ವೀರಶೈವ ಕವಿಗಳಲ್ಲಿ ಇವನೂ ಒಬ್ಬ. ಹಳೇಬೀಡಿನ ಕರಣಿಕರ ಕುಟುಂಬದಿಂದ ಬಂದ ಹರಿಹರನು ಹಂಪೆಯಲ್ಲಿ ಅನೇಕ ವರ್ಷಗಳನ್ನು ಕಳೆದು , ನೂರಕ್ಕೂ ಹೆಚ್ಚು ರಗಳೆಗಳನ್ನು ರಚಿಸಿದನು. ಇವು ವಿರೂಪಾಕ್ಷ ದೇವರ ಗುಣಗಾನ ಮಾಡುವ ರಗಳೆಗಳಾಗಿವೆ. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ ಷಟ್ಪದಿಯ ಬಳಕೆಯನ್ನು ಮೊಟ್ಟಮೊದಲ ಬಾರಿಗೆ ಮಾಡಿದ. ಕನ್ನಡ ವ್ಯಾಕರಣದ ನಿಯಮಗಳನ್ನು ಕೆಲವೊಮ್ಮೆ ಉಲ್ಲಂಘಿಸಿದ್ದರೂ, ಇದು ಕನ್ನಡ ಸಾಹಿತ್ಯದ ಅತಿಶ್ರೇಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.
ಇನ್ನು ಸಂಸ್ಕೃತದಲ್ಲಿ , ಮಧ್ವಾಚಾರ್ಯರು , ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದರು. ಇದಲ್ಲದ, ಇತರ ವೈದಿಕ ಶಾಖೆಗಳನ್ನು ಟೀಕಿಸುವ ವಿಮರ್ಶೆಗಳನ್ನೂ ಅವರು ಬರೆದರು. ತಮ್ಮ ತತ್ವಗಳಿಗೆ ಪ್ರಮಾಣಗ್ರಂಥಗಳಾಗಿ , ವೇದಗಳ ಬದಲಾಗಿ , ಪುರಾಣಗಳನ್ನು ಆರಿಸಿಕೊಂಡರು. ವಿದ್ಯಾತೀರ್ಥ ಬರೆದ ರುದ್ರಪ್ರಶ್ಣಾಭಾಷ್ಯವು ಆ ಕಾಲದ ಮತ್ತೊಂದು ಪ್ರಸಿದ್ಧ ಗ್ರಂಥ.

 

 

 

 

 

 

 

 

 

 

 

ಶಿಲ್ಪಕಲೆ

ಸೋಮನಾಥಪುರದಲ್ಲಿ ಹೊಯ್ಸಳ ಶಿಲ್ಪಕಲೆ
ಹೊಯ್ಸಳರ ಸಾಮ್ರಾಜ್ಯ ವಿಸ್ತರಣೆಗಿಂತಲೂ , ಕಲೆ ಮತ್ತು ಶಿಲ್ಪಕೆಲಗಳಿಗೆ ಅವರಿತ್ತ ಪ್ರೋತ್ಸಾಹಕ್ಕಾಗಿ ಈ ಸಾಮ್ರಾಜ್ಯದ ಬಗ್ಯೆ ಆಧುನಿಕ ಸಂಶೋಧನೆ ಬಹು ಮುಖ್ಯವಾಗುತ್ತದೆ. ದಕ್ಷಿಣದಿಂದ ಪಾಂಡ್ಯರು ಮತ್ತು ಉತ್ತರದ ಸೇವುಣರಿಂದ ಸದಾ ದಾಳಿಯ ಅಪಾಯವಿದ್ದರೂ, ಹೊಯ್ಸಳ ರಾಜ್ಯದಾದ್ಯಂತ ದೇವಾಲಯನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿತ್ತು. ಪಷ್ಚಿಮ ಚಾಲುಕ್ಯರ ಶಿಲ್ಪಕಲಾಶೈಲಿಯ ಶಾಖೆಯಾಗಿ ಬೆಳೆದ ಈ ಕಾಲದ ಶೈಲಿಯಲ್ಲಿ ದ್ರಾವಿಡ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಗಿಂತಲೂ ವಿಶಿಷ್ಟವಾಗಿದ್ದ ಈ ಶೈಲಿಯನ್ನು ಕರ್ನಾಟ ದ್ರಾವಿಡ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.
ಹೊಯ್ಸಳರ ದೇವಸ್ಥಾನ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ದೇಗುಲದ ಗೋಪುರದ ವಿಮಾನಗಳಲ್ಲಿ ಎತ್ತರ ಮತ್ತು ಗಾತ್ರಕ್ಕಿಂತ ಅತ್ಯಂತ ನೈಪುಣ್ಯಶೀಲ ಕಲೆಯನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗುತ್ತಿತ್ತು. ಮೃದುವಾದ ಕಲ್ಲಾಗಿದ್ದ ಬಳಪದ ಕಲ್ಲನ್ನು (Soapstone - Chloritic schist) ದೇಗುಲಗಳನ್ನು ಕಟ್ಟಲು ಉಪಯೋಗಿಸಲ್ಪಡುತ್ತಿತ್ತು. ಬೇಲೂರಿನ ಚೆನ್ನಕೇಶವ ದೇವಸ್ಥಾನ (೧೧೧೭), ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ (೧೧೨೧), ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ (೧೨೭೯), ಅರಸೀಕೆರೆ (೧೨೨೦), ಅಮೃತಪುರ (೧೧೯೬), ಯಳೇಶಪುರದ ಎಳ್ಳೇಶ್ವರ್ ದೇವಾಲಯವು (೧೨೩೮ರ ಜನವರಿ ೨೭), ಬೆಳವಾಡಿ (೧೨೦೦) ಮತ್ತು ನುಗ್ಗೇಹಳ್ಳಿ (೧೨೪೬) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಡಕಲಸಿ (೧೨೧೮) ದೇವಸ್ಥಾನಗಳು ಹೊಯ್ಸಳ ಶಿಲ್ಪಕಲೆಯ ಪ್ರಮುಖ ಉದಾಹರಣೆಗಳು. ಇವೇ ಅಲ್ಲದೆ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಮಹಾಲಕ್ಶ್ಮಿಯ ದೇವಾಲಯ, ಕೋರವಂಗಲದ ಬೂಚೇಶ್ವರ, ಹಾರನಹಳ್ಳಿಯ ಲಕ್ಷ್ಮೀನರಸಿಂಹ,ಮೊಸಳೆಯ ಚೆನ್ನಕೇಶವ-ನಾಗೇಶ್ವರ ಜೋಡಿ ದೇವಾಲಯ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿರುವ ದೇವಾಲಯ ಹೊಯ್ಸಳರ ಕಾಲದ ಕಲಾಕೌಶಲಕ್ಕೆ ನಿದರ್ಶನವಾಗಿವೆ.ಅನೇಕ ದೇವಾಲಯಗಳ ಹೊರಗಿನ ಗೋಡೆಗಳಲ್ಲಿ ಹಿಂದೂ ಪುರಾಣಗಳ ಕಥನಗಳನ್ನು ನಿರೂಪಿಸಲಾಗಿದೆ. ಪ್ರದಕ್ಷಣೆಯ ದಿಕ್ಕಿನಲ್ಲಿ ಈ ಕಥನಗಳ ನಿರೂಪಣೆ ಸಾಗುತ್ತದೆ.

ಭಾಷೆ

ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಪಾಠಶಾಲೆಗಳಾಗಿಯೂ ಉಪಯೋಗಿಸಲಾಗುತ್ತಿದ್ದ ದೇವಾಲಯಗಳಲ್ಲಿ ಬ್ರಾಹ್ಮಣ ಪಂಡಿತರು ಸಂಸ್ಕೃತದಲ್ಲಿ ಕಲಿಸಿದರೆ, ಜೈನ ಮತ್ತು ಬೌದ್ಡ ವಿಹಾರಗಳಲ್ಲಿ, ಮುನಿಗಳು ಶಿಷ್ಯರಿಗೆ ವಿದ್ಯೆ ಕಲಿಸುತ್ತಿದ್ದರು. ಉಚ್ಚ ವಿದ್ಯಾಕೇಂದ್ರಗಳಿಗೆ ಘಟಿಕಾ ಎಂದು ಹೆಸರಿತ್ತು. ಪ್ರವರ್ಧಮಾನಕ್ಕೆ ಬರುತ್ತಿದ್ದ ಭಕ್ತಿ ಪಂಥವು ವಚನಗಳು ಮತ್ತು ದೇವರನಾಮಗಳಿಗೆ ಕನ್ನಡ ಭಾಷೆಯನ್ನು ಬಳಸಿತು. ಸಾಹಿತ್ಯ ಕೃತಿಗಳನ್ನು ತಾಳೆಗರಿಯ ಮೇಲೆ ರಚಿಸಲಾಗುತ್ತಿತ್ತು. ಹಿಂದಿನ ಶತಮಾನಗಳಲ್ಲಿ ಜೈನ ಸಾಹಿತ್ಯ ಕೃತಿಗಳು ಪ್ರಧಾನವಾಗಿದ್ದರೂ, ಹೊಯ್ಸಳರ ಕಾಲದಲ್ಲಿ ಶೈವ ಮತ್ತು ಬ್ರಾಹ್ಮಣ ಕೃತಿಗಳು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದವು. ಸಂಸ್ಕೃತ ಸಾಹಿತ್ಯದಲ್ಲಿ ಕಾವ್ಯ, ವ್ಯಾಕರಣ , ವಿಶ್ವಕೋಶ , ಕೈಪಿಡಿಗಳು , ಹಿಂದಿನ ಕೃತಿಗಳ ಮೇಲೆ ಭಾಷ್ಯಗಳು, ನಾಟಕಗಳು, ಗದ್ಯ ಕಥೆಗಳು ಇತ್ಯಾದಿಗಳು ರಚನೆಯಾದವು. ತಾಮ್ರ ಮತ್ತು ಶಿಲಾಶಾಸನಗಳು ಕನ್ನಡ, ಸಂಸ್ಕೃತ ಅಥವಾ ಇವೆರಡೂ ಭಾಷೆಯಲ್ಲಿರುತ್ತಿದ್ದವು. ಹಿನ್ನೆಲೆ , ರಾಜರ ಬಿರುದು ಬಾವಲಿಗಳು ಇತ್ಯಾದಿಗಳು ಸಂಸ್ಕೃತದಲ್ಲಿದ್ದರೆ, ಉಂಬಳಿಯ ವಿವರಗಳು, ಭೂಮಿಯ ತಪಶೀಲು, ಸರಹದ್ದು, ಸ್ಥಳೀಯ ಆಡಳಿತಾಧಿಕಾರಿಗಳು, ಕಂದಾಯ , ಉಂಬಳಿ ಪಡೆದವನ ಹಕ್ಕು ಮತ್ತು ಕರ್ತವ್ಯಗಳು, ಸಾಕ್ಷಿಗಳು ಈ ವಿವರಗಳು ಕನ್ನಡದಲ್ಲಿರುತ್ತಿದ್ದವು.ಈ ಮೂಲಕ ಶಾಸನದ ವಿವರಗಳು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೋಡಿಕೊಳ್ಳಲಾಗುತ್ತಿತ್ತು.

ಭಾರತದ ಇತಿಹಾಸ -1

ಭಾರತದ ಇತಿಹಾಸ -1


ಸಂಗಂ ಯುಗ :-1.“ ಸಂಗಂ “ ಎಂಬ ಪದದ ಅರ್ಥ “ ಒಟ್ಟು ಗೂಡುವುದು “ ಅಥವಾ “ ಸಂಘಟನೆ “
2. ಸಂಗಂ ಎಂಬುದು ಭೌದ್ಧರ “ ಸಂಘ “ ಎಂಬ ಪದದಿಂದ ಬಂದಿದೆ .
3. ಸಂಗಂ ಗಳು ಪಾಂಡ್ಯ ರಾಜಧಾನಿಯಾದ ವೇಗೈ ನದಿಯ ದಡದ ಮೇಲಿರು ಮಧುರೇಯಲ್ಲಿ ರಾಜಾಶ್ರಯ ಪಡೆದಿತ್ತು .
4. ತಮಿಳು ಸಂಪ್ರಾದಾಯದಂತೆ ಮೂರು ಸಂಘಗಳಿದ್ದವು .
5. ಈ ಸಂಘ ಕ್ರಿ.ಶ. ಆರಂಭದ ಕಾಲದಲ್ಲಿತ್ತು .
6. ಸಂಗಂ ಸಾಹಿತ್ಯ - ತಮಿಳುನಾಡಿನ ಪ್ರಾಚೀನ ಇತಿಹಾಸದ ಮೂಲ ಆಧಾರವಾಗಿದೆ .
7. ಈ ಕಾಲದ ಪ್ರಸಿದ್ಧ ಕೃತಿಗಳು - “ ಪತ್ ಪಾಟ್ಟ್ “ ಹಾಗೂ “ ಎಟ್ಟುತ್ತೊಗೈ “
8. ಈ ಕಾಲದ ಮಹತ್ವದ ವ್ಯಾಕರಣ ಗ್ರಂಥ - “ ತೋಳ್ ಕಾಪ್ಫಿಯಂ “
9. ದಕ್ಷಿಣ ಬಾರತದ ಚರಿತ್ರೆಯು - ಪಾಂಡ್ಯರು , ಚೇರ ಹಾಗೂ ಚೋಳ ರೆಂಬ ಮೂರು ತಮಿಳು ರಾಜ ವಂಶಗಳಿಂದ ಪ್ರಾರಂಭವಾಗುತ್ತದೆ .
10. ದಕ್ಷಿಣ ಬಾರತದ ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಭಾಷೆ “ ತಮಿಳು “ ಈ ರಾಜಮನೆತನದ ಭಾಷೆಯಾಗಿತ್ತು .
11. ತಮಿಳು ಭಾಷೆಯ ಪಿತಾಮಹಾ - “ ಅಗಸ್ತ್ಯ “ .
12. ತಮಿಳು ಭಾಷೆಯ ಪ್ರಥಮ ವೈಯಾಕರಣಿ - “ ಅಗಸ್ತ್ಯ “
13. ಅಗಸ್ತ್ಯ ಈ ಪ್ರದೇಶದಲ್ಲಿ ನೆಲೆಸಿದ್ದ - ಉತ್ತರದಿಂದ ಬಂದು ದಕ್ಷಿಣದ “ ಪೋಟಿಯಲ್ “ ಎಂಬಲ್ಲಿ ನೆಲೆಸಿದ್ದ .
14 ತಮಿಳು ಭಾಷೆಯ ಪ್ರಾರಂಭದ ಕಾಲವನ್ನು - “ ಸಂಗಂ ಯುಗ “ ಎಂದು ಕರೆಯಲಾಗಿದೆ .
15 ದಕ್ಷಿಣ ಭಾರತದ ತಮಿಳ್ ಗಮ್ ಅಥವಾ ತಮಿಳ್ ಹಮ್ ನ ಮಧುರೆಯಲ್ಲಿ ಸೇರಿ ಸಾಹಿತ್ಯದ ಸುತ್ತ ಹೆಣೆದ ಕವಿ ಕವಿ ಕೂಟವೆ - “ ಸಂಗಂ “
16. ಸಂಗಂ - ಎಂದರೆ ಮಧುರೆಯಲ್ಲಿದ್ದ ಒಂದು ಸಾಹಿತ್ಯ ಒಕ್ಕೂಟ ಅಥವಾ ದಾರ್ಶನಿಕ ಸಂಸ್ಥೆ ಎಂದರ್ಥ .

ರಾಜಕೀಯ ಇತಿಹಾಸ :- ( ಪಾಂಡ್ಯರು )

17. ತಮಿಳು ಸಂಗಂ ಅರಸರಲ್ಲಿ - ಚೋಳ , ಚೇರ ಹಾಗೂ ಪಾಂಡ್ಯ ಅರಸರು ಪ್ರಮುಖರು
18. ಪಾಂಡ್ಯರ ರಾಜಧಾನಿಗಳು - ತೀನ್ ಮಧುರೆ , ಕಾಪಟಾಪುರ ನಂತರ ಮಧುರೈ
19. ಪಾಂಡ್ಯರ ಲಾಂಛನ - ಮೀನು
20. ಪಾಂಡ್ಯ ಅರಸರು ರೋಮ್ ಚಕ್ರವರ್ತಿ - ಅಗಸ್ಟಸ್ ನ ಆಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದ್ಧರು .
21. ಪಾಂಡ್ಯ ಅರಸರ ಪ್ರಸಿದ್ಧ ಅರಸ - ನೆಡುಂ ಚೆಳಿಯನ್ .
22. ನೆಡುಂ ಚೆಳಿಯನ್ 5 ಪಾಳೆಗಾರರನ್ನು ವಿರೋಧಿ ಒಕ್ಕೂಟವನ್ನು ಸೋಲಿಸಿದ ಸ್ಥಳ - “ ತಲೈ ಯಾಲುಗಾನಂ “ .
“ ತಲೈ ಯಾಲಂಗಾನ ಯುದ್ಧದ ವಿಜೇತ “ ಎಂಬ ಬಿರುದುಳ್ಳ ಅರಸನ ಹೆಸರು “ ನೆಡುಂ ಚೆಳಿಯನ್ “
23. ಮಾಗುಂಡಿ ಮರುವನ್ ಮತ್ತು ನಕ್ಕಿರರ್ ಕವಿಗಳ ಆಶ್ರಯದಾತ - ನೆಡುಂ ಚೆಳಿಯನ್ .
24. ಪಾಂಡ್ಯರ ಕೊನೆಯ ಅರಸ - ಪೆರವ ಲೂಟಿ

ಚೇರರು :-

25. ಚೇರ ಮನೆತನದ ಈ ರಾಜ್ಯಗಳನ್ನು ಒಳಗೊಂಡಿತ್ತು - “ ಕೇರಳ ಮತ್ತು ತಮಿಳು ನಾಡು “
26. ಚೇರರ ರಾಜಧಾನಿ - “ ತಿರುವಂಜಿ ಪಟ್ಟಣ”
27. ಚೇರರ ರಾಜ್ಯಾ ಲಾಂಛನ - “ ಧನಸ್ಸು “
28. ಚೇರರ ಮೊದಲ ದೊರೆ - “ ಉದಿಯೆಂಜರಲ್ “
29. ಚೇರರ ಪ್ರಸಿದ್ಧ ದೊರೆ - “ ಸೆಂಗುತ್ತವನ್ ಚೇರ “

ಚೋಳರು :-

30. ಚೋಳರ ರಾಜ್ಯವು - ಪಾಂಡ್ಯ ರಾಜ್ಯದ ಈಶಾನ್ಯಕ್ಕೆ ಪೆನ್ನಾರ್ ಮತ್ತು ವೇಾರ್ ನದಿಗಳ ನಡುವೆ ಇತ್ತು .
31. ಚೋಳರ ಪ್ರಮುಖ ರಾಜಕೀಯ ಕೇಂದ್ರ - “ ಉರೆಯೂರ್ “
32. ಚೋಳರ ರಾಜಧಾನಿ - “ ಪುಹಾರ್ ಅಥಾವ ಕಾವೇರಿ ಪಟ್ಟಣ “
33. ಚೋಳರ ರಾಜ್ಯ ಲಾಂಛನ - “ ವ್ಯಾಘ್ರ ಅಥವಾ ಹುಲಿ “ .
34. ಚೋಳರ ಪ್ರಥಮ ದೊರೆ - “ ಇಳೈಯಾನ್ ಚೋಳ “
35. ಇಳೈಯಾನ್ ಚೋಳನ ನಂತರ ಅಧಿಕಾರಕ್ಕೆ ಬಂದವನು - “ ಕರಿಕಾಲ ಚೋಳ “
36. ಚೋಳರ ಪ್ರಸಿದ್ಧ ದೊರೆ - “ ಕರಿಕಾಲ ಚೋಳ “
37. ವೆಣೈ ಯುದ್ಧ ಕೈಗೊಂಡ ಚೋಲ ದೊರೆ - “ ಕರಿಕಾಲ ಚೋಳ “
38. ಪುಹಾರ್ ಎಂಬ ಚೋಳ ಬಂದರಿನ ನಿರ್ಮಾತೃ - “ ಕರಿಕಾಲ ಚೋಳ “
39. ಉರೆಯೂರಿನಲ್ಲಿ ರಾಜಧಾನಿಯನ್ನ ಸ್ಥಾಪಿಸಿದ ಚೋಳ ದೊರೆ - “ ಕರಿಕಾಲ ಚೋಳ “
40.“ ಕಾವೇರಿ ಪಟ್ಟಣಂ “ ನಲ್ಲಿ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿಮನು - “ ಕರಿಕಾಲ ಚೋಳ “
41.ವೆಣ್ಣಾರ್ ನಾಲೆಯ ನಿರ್ಮಾತೃ - ಕರಿಕಾಲ ಚೋಳ
42. ಶ್ರೀರಂಗದ ಗ್ರಾಂಡ್ ಅಣಿಕಟ್ಟಿನ ನಿರ್ಮಾತೃ - ಕರಿಕಾಲ ಚೋಳ
43. ಚೋಳ ರಾಜ್ಯದ ಸ್ಥಾಪಕ ದೊರೆ - ವಿಜಯಾಲ
44. ಚೋಳರ ಮತ್ತೋಬ್ಬ ಪ್ರಬಲ ದೊರೆ - “ ರಾಜರಜ ಚೋಳ “
45. ರಾಜರಾಜ ಚೋಳನ ಮಗನ ಹೆಸರು - ‘ ರಾಜೇಂದ್ರ “
46. ಗಂಗೈಕೊಂಡ ಚೋಳ ಎಂಬ ಬಿರುದ್ದನ್ನು ಧರಿಸಿದ ಅರಸ - “ ರಾಜೇಂದ್ರ “
47. “ ಚೋಳ ಗಂಗಂ “ ಕೆರೆಯ ನಿರ್ಮಾತೃ - “ ರಾಜೇಂದ್ರ “
48. “ ಗಂಗೈಕೊಂಡ ಚೋಳ ಪುರಂ “ ಎಂಬ ಹೊಸ ನಗರದ ನಿರ್ಮಾತೃ - “ ರಾಜೇಂದ್ರ “
49. ರಾಜೇಂದ್ರನ ರಾಜಧಾನಿ - “ ಗಂಗೈಕೊಂಡ ಚೋಳಪುರಂ “
50. “ ಕದರಂಗೊಂಡ “ ಎಂಬ ಬಿರುದುಳ್ಳ ಅರಸ - “ ರಾಜೇಂದ್ರ “

ಚೋಳರ ರಾಜ್ಯಾಡಳಿತ :-

51. ರಾಜನೆ ಸಾರ್ವಬೌಮನಾಗಿದ್ದ
52. ಅಧಿಕಾರ ವಂಶ ಪಾರಂಪರ್ಯವಾಗಿತ್ತು
53. ಆಯಾ ಸ್ಥಳದ ವ್ಯವಹಾರ ನಿರ್ವಹಣಿಗೆ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು .
54. ಸ್ಥಳೀಯ ಸಂಸ್ಥೆಗಳಿಗೆ ಜನರಿಂದ ಚುನಾವಣಿ ನಡೆಯುತ್ತಿತ್ತು .
55. ನಾಡು, ಒಳನಾಡು ಹಾಗೂ ಮಂಡಲ ರಾಜ್ಯದ ಆಡಳಿತ ವಿಭಾಗವಾಗಿತ್ತು .
56. ರಾಜರಾಜ ಹಾಗೂ ರಾಜೇಂದ್ರ ಚೋಳರು - ಚೀನಾಕ್ಕೆ ರಾಯಭಾರಿಗಳನ್ನು ಕಳಿಸಿದ್ದರು .
57. ವ್ಯಾಪಾರ ವ್ಯವಹಾರದ ಅಭಿವೃದ್ಧಿಗೆ - “ ವಾಣಿಜ್ಯ ಸಂಘ “ ಪ್ರಮುಖ ಪಾತ್ರವಹಿಸಿತ್ತು .
58. ಚೋಳರು - ಕಗ್ಗಲ್ಲಿನಿಂದ ದೇವಾಲಯ ನಿರ್ಮಾಣ ಮಾಡಿದರು .
59. ದೇವಾಲಯಗಳಲ್ಲಿ - ದ್ರಾವಿಡಶೈಲಿ ಯನ್ನು ಉಪಯೋಗಿಸಿದ್ದರು .
60. ತಂಜಾವೂರಿನ ಬೃಹದೀಶ್ವರ ದೇವಾಲಯ ಚೋಳರ ಅತ್ಯಂತ ವಿಶಾಲ ದೇವಾಲಯ .
61. ಬೃಹದೀಶ್ವರ ದೇವಾಲಯದ ನಿರ್ಮಾತೃ - ರಾಜರಾಜ ಚೋಳ 1009 ರಲ್ಲಿ ನಿರ್ಮಿಸಿದ.
62. ‘ ಗಂಗೈಕೊಂಡ ಚೋಳಪುರಂ “ ದೇವಾಲಯದ ನಿರ್ಮಾತೃ - ರಾಜೇಂದ್ರ ಚೋಳ 1030
63. ಚೋಳರ ಆಸ್ಥಾನದ ಪ್ರಮುಖ ಕವಿ - ಜಯಗೊಂಡರ್ .
64. “ ಪೆರಿಯಾ ಪುರಾಣ “ ಕೃತಿಯ ಕರ್ತೃ - ಶೆಕ್ಕಿಲಾರ್ ( ಭಕ್ತಿ ಸಾಹಿತ್ಯದ ಕೃತಿ )
65. “ ಕಂಬ ರಾಮಾಯಣ “ ಮಹಾಕಾವ್ಯದ ಕರ್ತೃ - ಕಂಬನ್

ಸಂಗಂ ಕಾಲದ ಆಡಳಿತ :-

66. ರಾಜ್ಯದ ಆಡಳಿತದ ಕೇಂದ್ರ ಬಿಂದು - ಅರಸ
67. ರಾಜ ಪದವಿ - ವಂಶ ಪಾರಂಪರ್ಯವಾಗಿತ್ತು .
68. ರಾಜರನ್ನು ದೈವಾಂಶ ಸಂಭೂತನೆಂದು ನಂಬಿದ್ದರು .
69. ರಾಜಕೀಯದಲ್ಲಿ ಅರಸನಿಗಿದ್ದ ಸಲಹಾ ಸಮಿತಿಗಳು - ಎಂಪೆರುಕುಳು ಹಾಗೂ ಎನ್ ಪೆರಾಯಮ್ .
70. ರಾಯಭಾರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಧೂತರು .
71. ಗೂಢಾಚರರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬರ್ರರ್ .
72. ರಾಜ್ಯವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು ,- ಮಂಜಲಮ್
73. ಪ್ರಾಂತ್ಯಗಳನ್ನು - ನಾಡುಗಳಾಗಿ ವಿಂಗಡಿಸಲಾಗಿತ್ತು .
74. ನಾಡುಗಳನ್ನ - ಹಳ್ಳಿಗಳಾಗಿ ಮತ್ತು ಪಟ್ಟಣಗಳಾಗಿ ವಿಬಾಗಿಸಲಾಗಿತ್ತು .
75. ಹಳ್ಳಿಗನ್ನ ಈ ರೀತಿ ವಿಭಾಗಿಸಲಾಗಿತ್ತು - “ ಸಿರೂರ್ ಮತ್ತು ಪೆರೂರ್ “
76. ಹಳ್ಳಿಯ ಗ್ರಾಮ ಸಭೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಅವೈ “
77. ಹಳ್ಳಿಯ ಆಗು ಹೋಗುಗಳನ್ನ ನೋಡಿಕೊಳ್ಳುತ್ತಿದ್ದ ಸಂಸ್ಥೆಗಳು - ಮನ್ರಾಂ ಮತ್ತು ಪೊಡಿಯಲ್
78. ಸೈನ್ಯವನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಪಪೈ “
79.ಸೇನಾಧಿಪತಿಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ತಾನೈತ್ ತಲೈವನ್
80.ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಿಗೆ ಸವಿ ನೆನಪಿಗಾಗಿ ನೆಡುತ್ತಿದ್ದ ಸ್ಮಾರಕಗಳು - ವೀರಕಲ್ಲು ಮತ್ತು ನೆಡುಕಲ್
81. ಸಂಗಂ ಯುಗದ ಜರನ ಆದಾಯದ ಮೂಲ - ಭೂಕಂದಾಯ ಹಾಗೂ ವ್ಯಾಪಾರ
82. ಭೂತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - “ ಕರೈ “
83. ಪಾಂಡ್ಯರ ರಾಜ್ಯವನ್ನು ಆಳುತ್ತಿದ್ದ ರಾಣಿ - ಪಾಂಡೈಯಾ
84. ಚೋಳರ ಕಾಲದಲ್ಲಿ ನ್ಯಾಯ ತೀರ್ಮಾನಕ್ಕೆ ಖ್ಯಾತಿ ಪಡೆದಿದ್ದ ಸ್ಥಳ - ಉರೈಯೂಲ್ .
85. ರೈತರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವೆಳ್ಳಾರರು .
86. ಸಂಗಂ ಕಾಲದಲ್ಲಿ ಕೃಷಿಗೆ ವರದಾನವಾಗಿ ಶ್ರಮಿಸಿದ ನದಿಗಳು - ಪೆಣ್ಣಾರ್ , ಪಾಲಾರ್ , ಕಾವೇರಿ ಮತ್ತು ತಾಮ್ರ ಪರ್ಣಿ .
87. ಚೇರ ದೇಶ ಈ ಹಣ್ಣಿಗೆ ಹೆಸರು ವಾಸಿಯಾಗಿತ್ತು - ಹಲಸು
88. ಸಂಗಂ ಕಾಲದಲ್ಲಿ ಹತ್ತಿ ಬಟ್ಟೆಗೆ ಹೆಸರಾದ ಸ್ಥಳ - ಉರೈಯೂರು
89. ಪಾಂಡ್ಯರ ಪ್ರಮುಖ ಬಂದರು - ಸಲಿಯೂರ್
90. ಚೋಳರ ಪ್ರಮುಖ ಬಂದರು - ಪುಹಾರ್ .
91. ಎತ್ತರದ ಬೆಳಕಿನ ಮನೆ ಈ ಬಂದರಿನಲ್ಲಿತ್ತು - ನಿರ್ಪೆಯರ್ಕು .
92. ಮಾರುಕಟ್ಟೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ಅವಣಂ
93. ಮಾರುಕಟ್ಟೆಯ ವಿಧಗಳು - ಮಾಳಂಗಾಟಿ ಹಾಗೂ ಅಲ್ಲಂಗಾಡಿ
94. ಬೆಳಗಿನ ಮಾರುಕಟ್ಟೆಯ ಹೆಸರು - ಮಾಳಂಗಾಡಿ
95. ಸಂಜೆಯ ಮಾರುಕಟ್ಟೆಯ ಹೆಸರು - ಅಲ್ಲಂಗಾಡಿ
96. ಬಾರತದಿಂದ ರಪ್ತಾಗುತ್ತಿದ್ದ ಮಲ್ಸನ್ ಗಳನ್ನು ಪ್ಲೀನಿ - ನೆಯ್ದ ಬಲೆಗಳು ಎಂದು ಕರೆದಿದ್ದಾರೆ .
97. ಮೆಣಸನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದ ಗ್ರೀಕರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಯವನ ಪ್ರಿಯರು
98. ಸಂಗಂ ಕಾಲದ ನಾಣ್ಯಗಳು - ನಿಷ್ಕ , ಫಲ , ಸುವರ್ಣ ( ಬಂಗಾರದ ನಾಣ್ಯ ) ಕಾಕಿನಿ ( ತಾಮ್ರದ ನಾಣ್ಯ ) ಹಾಗೂ
99. ಶತಮಾನ ( ಬೆಳ್ಳಿ ನಾಣ್ಯ ) .ಸಂಗಂ ಸಮಾಜದಲ್ಲಿ ಬ್ರಾಹ್ಮಣರನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಂದಣರ್

ಭಾರತದ ಇತಿಹಾಸ

ಭಾರತದ ಇತಿಹಾಸ

ಸಂಗಂ ಕಾಲದ ಆಡಳಿತ :-

  • ರಾಜ್ಯದ ಆಡಳಿತದ ಕೇಂದ್ರ ಬಿಂದು - ಅರಸ
  • ರಾಜ ಪದವಿ - ವಂಶ ಪಾರಂಪರ್ಯವಾಗಿತ್ತು .
  • ರಾಜರನ್ನು ದೈವಾಂಶ ಸಂಭೂತನೆಂದು ನಂಬಿದ್ದರು .
  • ರಾಜಕೀಯದಲ್ಲಿ ಅರಸನಿಗಿದ್ದ ಸಲಹಾ ಸಮಿತಿಗಳು - ಎಂಪೆರುಕುಳು ಹಾಗೂ ಎನ್ ಪೆರಾಯಮ್ .
  • ರಾಯಭಾರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಧೂತರು .
  • ಗೂಢಾಚರರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬರ್ರರ್ .
  • ರಾಜ್ಯವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು ,- ಮಂಜಲಮ್
  • ಪ್ರಾಂತ್ಯಗಳನ್ನು - ನಾಡುಗಳಾಗಿ ವಿಂಗಡಿಸಲಾಗಿತ್ತು .
  • ನಾಡುಗಳನ್ನ - ಹಳ್ಳಿಗಳಾಗಿ ಮತ್ತು ಪಟ್ಟಣಗಳಾಗಿ ವಿಬಾಗಿಸಲಾಗಿತ್ತು .
  • ಹಳ್ಳಿಗನ್ನ ಈ ರೀತಿ ವಿಭಾಗಿಸಲಾಗಿತ್ತು - “ ಸಿರೂರ್ ಮತ್ತು ಪೆರೂರ್ “
  • ಹಳ್ಳಿಯ ಗ್ರಾಮ ಸಭೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಅವೈ “
  • ಹಳ್ಳಿಯ ಆಗು ಹೋಗುಗಳನ್ನ ನೋಡಿಕೊಳ್ಳುತ್ತಿದ್ದ ಸಂಸ್ಥೆಗಳು - ಮನ್ರಾಂ ಮತ್ತು ಪೊಡಿಯಲ್
  • ಸೈನ್ಯವನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಪಪೈ “
  • ಸೇನಾಧಿಪತಿಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ತಾನೈತ್ ತಲೈವನ್
  • ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಿಗೆ ಸವಿ ನೆನಪಿಗಾಗಿ ನೆಡುತ್ತಿದ್ದ ಸ್ಮಾರಕಗಳು - ವೀರಕಲ್ಲು ಮತ್ತು ನೆಡುಕಲ್
  • ಸಂಗಂ ಯುಗದ ಜರನ ಆದಾಯದ ಮೂಲ - ಭೂಕಂದಾಯ ಹಾಗೂ ವ್ಯಾಪಾರ
  • ಭೂತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - “ ಕರೈ “
  • ಪಾಂಡ್ಯರ ರಾಜ್ಯವನ್ನು ಆಳುತ್ತಿದ್ದ ರಾಣಿ - ಪಾಂಡೈಯಾ
  • ಚೋಳರ ಕಾಲದಲ್ಲಿ ನ್ಯಾಯ ತೀರ್ಮಾನಕ್ಕೆ ಖ್ಯಾತಿ ಪಡೆದಿದ್ದ ಸ್ಥಳ - ಉರೈಯೂಲ್ .
  • ರೈತರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವೆಳ್ಳಾರರು .
  • ಸಂಗಂ ಕಾಲದಲ್ಲಿ ಕೃಷಿಗೆ ವರದಾನವಾಗಿ ಶ್ರಮಿಸಿದ ನದಿಗಳು - ಪೆಣ್ಣಾರ್ , ಪಾಲಾರ್ , ಕಾವೇರಿ ಮತ್ತು ತಾಮ್ರ ಪರ್ಣಿ .
  • ಚೇರ ದೇಶ ಈ ಹಣ್ಣಿಗೆ ಹೆಸರು ವಾಸಿಯಾಗಿತ್ತು - ಹಲಸು
  • ಸಂಗಂ ಕಾಲದಲ್ಲಿ ಹತ್ತಿ ಬಟ್ಟೆಗೆ ಹೆಸರಾದ ಸ್ಥಳ - ಉರೈಯೂರು
  • ಪಾಂಡ್ಯರ ಪ್ರಮುಖ ಬಂದರು - ಸಲಿಯೂರ್
  • ಚೋಳರ ಪ್ರಮುಖ ಬಂದರು - ಪುಹಾರ್ .
  • ಎತ್ತರದ ಬೆಳಕಿನ ಮನೆ ಈ ಬಂದರಿನಲ್ಲಿತ್ತು - ನಿರ್ಪೆಯರ್ಕು .
  • ಮಾರುಕಟ್ಟೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ಅವಣಂ
  • ಮಾರುಕಟ್ಟೆಯ ವಿಧಗಳು - ಮಾಳಂಗಾಟಿ ಹಾಗೂ ಅಲ್ಲಂಗಾಡಿ
  • ಬೆಳಗಿನ ಮಾರುಕಟ್ಟೆಯ ಹೆಸರು - ಮಾಳಂಗಾಡಿ
  • ಸಂಜೆಯ ಮಾರುಕಟ್ಟೆಯ ಹೆಸರು - ಅಲ್ಲಂಗಾಡಿ
  • ಬಾರತದಿಂದ ರಪ್ತಾಗುತ್ತಿದ್ದ ಮಲ್ಸನ್ ಗಳನ್ನು ಪ್ಲೀನಿ - ನೆಯ್ದ ಬಲೆಗಳು ಎಂದು ಕರೆದಿದ್ದಾರೆ .
  • ಮೆಣಸನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದ ಗ್ರೀಕರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಯವನ ಪ್ರಿಯರು
  • ಸಂಗಂ ಕಾಲದ ನಾಣ್ಯಗಳು - ನಿಷ್ಕ , ಫಲ , ಸುವರ್ಣ ( ಬಂಗಾರದ ನಾಣ್ಯ ) ಕಾಕಿನಿ ( ತಾಮ್ರದ ನಾಣ್ಯ ) ಹಾಗೂ ಶತಮಾನ ( ಬೆಳ್ಳಿ ನಾಣ್ಯ ) .
  • ಸಂಗಂ ಸಮಾಜದಲ್ಲಿ ಬ್ರಾಹ್ಮಣರನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಂದಣರ್
  • ಸಂಗಂ ಯುಗದ ಪ್ರಸಿದ್ಧ ಕವಯಿತ್ರಿಗಳು - ಅಮ್ಟೆ ಮತ್ತು ನೆಚ್ಚಿಲ್ಲಿಯರ್
  • ಸಂಗಂ ಸಮಾಜದ ಜನರನ್ನು ಕೇಶಾಲಂಕಾರವನ್ನು ಈ ಹೆಸರಿನಿಂದ ಕರೆಯತ್ತಿದ್ದರು - ಇಂಪಾಲ್ .
  • ಸಂಗಂ ಜನರ ರುಚಿಕರವಾದ ಆಹಾರ - ಪೊಂಗಲ್
  • ಸಂಗಂ ಸಮಾಜದಲ್ಲಿ ಚಿತ್ರಕಲೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಇಯಾಮ್ .
  • ಸಂಗಂ ಜನರ ಪ್ರಮುಖ ಧಾರ್ಮಿಕ ಪದ್ಧತಿ - ಶಿವಾರಾಧನೆ , ಮಾತೃ ದೇವತಾರಾಧನೆ ಮತ್ತು ಲಿಂಗಾರಾಧನೆ ,
  • ಸಂಗಂ ಯುಗದ ಮುಖ್ಯ ದೇವರು - ಮುರುಗನ್ .
  • ಮುರುಗನನ್ನು ತೃಪ್ತಿಪಡಿಸಲು ನಡೆಯುತ್ತಿದ್ದ ನೃತ್ಯ - ವೆಲಂಡಾಲ್ .
  • ಮಧರೈಯಲ್ಲಿ ಏಪ್ರಿಲ್ ತಿಂಗಳ ಕೊನೆಯಲ್ಲಿ ಆಚರಿಸುತ್ತಿದ್ದ ಉತ್ಸವ - ಕಾಮನ ಉತ್ಸವ
  • ಸಂಗಂ ಜನರು ದೇವಾಲಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕೋಯಿಲ್
  • ಸಂಗಂ ಜನರ ಆರಂಭ ಕಾಲದ ಪೂಜೆ - ಪತ್ತಿನಿ ( ಪರಿಶುದ್ಧ ಸ್ತ್ರೀಪೂಜೆ )
  • ಸಂಗಂ ಕಾಲದಲ್ಲಿ ಬೌದ್ಧಧರ್ಮದ ಕೇಂದ್ರಗಳು - ನಾಗಪಟ್ಟಣಂ , ಕಾಂಜಿವರಂ ಹಾಗೂ ಮಧುರೈ.
  • ಜೈನ ಧರ್ಮದ ಪ್ರಮುಖ ಕೇಂದ್ರ - ಮಧುರೈ

ಸಂಗಂ ಸಾಹಿತ್ಯ :-

  • ಸಾಹಿತ್ಯದ ದೃಷ್ಠಿಯಿಂದ ಸಂಗಂ ಯುಗವನ್ನು ಈ ಹೆಸರಿನಿಂದ ಕರೆಯಲಾಗಿದೆ “ ಅಗಸ್ಟಸ್ ಯುಗ “ .
  • “ ಅಗಸ್ಟಸ್ ಯುಗ “ ಎಂದು ಕರೆದವರು - ಡಾ. ವಿ.ಎ.ಸ್ಮಿತ್
  • ಸಂಗಂ ಯುಗದಲ್ಲಿ “ ಪ್ರೆಂಚ್ ಅಕಾಡೆಮಿ “ ಗಳಂತೆ ಕಾರ್ಯನಿರ್ವಹಿಸುತ್ತಿದ್ದವು - ಸಂಗಂ ಕೂಟಗಳು .
  • ಪಾಂಡ್ಯರ ಕಾಲದ ಪ್ರಥಮ ಸಂಗಂ ಅಥವಾ ತಲೈ ಸಂಗಂ ಸ್ಥಾಪನೆಯಾದ ಸ್ಥಳ - ತೀನ್ ಮಧುರೈ .
  • ಪ್ರಥಮ ಸಂಗಂನ ಅಧ್ಯಕ್ಷ - ಅಗಸ್ತ್ಯ .
  • ಎರಡನೇ ಸಂಗಂ ಅಥವಾ ನಡುಸಂಗಂನ ಸ್ಥಾಪಿತವಾದ ಸ್ಥಳ - ಕಟಕಾಪುರ .
  • ಎರಡನೇ ಸಂಗಂನ ಅಧ್ಯಕ್ಷ - ಅಗತ್ತಿಯರ್ರ .
  • ಅತ್ಯಂತ ಪ್ರಾಚೀನ ತಮಿಳು ವ್ಯಾಕರಣ ಗ್ರಂಥ - ತೋಲ್ಯಪ್ಪಿಯಂ
  • ತೋಳಪ್ಪಿಯಂ ವ್ಯಾಕರಣ ಗ್ರಂಥದ ಕರ್ತೃ - ತೊಲ್ ಕಪ್ಪಿಯಲ್
  • ಮೂರನೇ ಸಂಗಂನ ಅಥವಾ ಕವೈ ಸಂಗಂ ಸ್ಥಾಪನೆಯಾದ ಸ್ಥಳ - ಮಧುರೈ .
  • ಮೂರನೇ ಸಂಗಂನಲ್ಲಿ ಅಥಾವ ಕಡೆಯ ಸಂಗಂನ ಅಧ್ಯಕ್ಷ - ನಕ್ಕಿರರ್
  • ಮೂರನೇ ಸಂಗಂನಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು - ಪತ್ತುಪಾಟ್ಟು , ಎಟ್ಟುತೊಗೈ , ಪದಿನೇಲ್ ಕೀಲ್ ಕರಣ ಕುಲ್
  • ಪ್ರಾಚೀನ ತಮಿಳರ ಸಾಮಾಜಿಕ ಹಾಗೂ ಧಾರ್ಮಿಕ ಚರಿತ್ರೆಯನ್ನು ಒಳಗೊಂಡ ಆಧಾರ ಗ್ರಂಥ - ಎಟ್ಟುತ್ತೊಗೈ .
  • ತಿರುಕುರಳ್ ಕೃತಿಯ ಕರ್ತೃ “ ತಿರುವಳ್ಳುವರ್ “
  • ಶಿಲಾಪ್ಪಾದಿಕರಂ ಕೃತಿಯ ಕರ್ತೃ “ ಇಳಂಗೋ ಅಡಿಗಳ್ “
  • “ ತಮಿಳು ನಾಡಿನ ಬೈಬಲ್ “ ಎಂದೆ ಪ್ರಸಿದ್ದವಾಗಿರುವ ಗ್ರಂಥ “ ತಿರುಕುರಳ್ “
  • “ ವೇದಾ ಸಾರವೆಂತಲೂ , ಸಾಸುವೆಯೊಳಗೆ 7 ಕಡಲು ಹುದುಗಿಸಿರುವ ಶ್ರೇಷ್ಠ ಕೃತಿ “ ಎಂದು ಖ್ಯಾತಿಯಾಗಿರುವ ಕೃತಿ - ತಿರುಕುರಳ್
  • “ಮಣಿ ಮಕೈಲೇ “ ಕೃತಿಯ ಕರ್ತೃ - ಸತ್ತನಾರ್ ( ಚಿತ್ತನೈ ಸತ್ತನಾರ್ )
  • ಜೀವಿಕ ಚಿಂತಾಮಣಿ ಕೃತಿಯ ಕರ್ತೃ “ ತಿರುತಕ್ಕ ದೇವರ್ “ ( ಜೈನ ಕೃತಿ )
  • ತಮಿಳು ಸಾಹಿತ್ಯದ ಸುವರ್ಣಯುಗ - ಸಂಗಂ ಯುಗ .

Extra Tips :-

  • ಪ್ರಾಚೀನ ತಮಿಳು ಸಾಹಿತ್ಯಕ್ಕೆ ಆಧಾರ - ಸಂಗಂ ವಾಯಜ್ಞಂ
  • ತಮಿಳು ದೇಶದ ಮೇಲೆ ಪ್ರಪ್ರಥಮವಾಗಿ ಸಾರ್ವಭೌಮತ್ವ ಸಾಧಿಸಿದ ಚೋಳರಾಜ - ಕುಕಾಲ ಚೋಳನ್ .
  • ಮಲಬಾರ್ ತೀರದಲ್ಲಿ ಚೇರ ಸೈರ್ವಭೌಮತ್ವವನ್ನು ನೆಲೆಗೊಳಿಸಿದ ರಾಜ - ನೆಡು ಚೇರನ್ ಆಂಡಾನ್ .
  • ಉತ್ತರ ಭಾರತದ ಗಂಗಾನದಿ ಪ್ರಾಂತ್ಯದವರೆಗೆ ಚೈತ್ರ ಯಾತ್ರೆ ನಡೆಸಿದ ರಾಜ - ಸೆಂಗುಟ್ಟು ವಾನ್ .
  • “ ಪರಮೇಶ್ವರ “ ಎಂಬ ಬಿರುದು ಧರಿಸಿದ್ದ ಪಾಂಡ್ಯ ಅರಸ - ನೆಡುಂ ಚೆಳಿಯನ್
  • “ ತಿರುಮೂರು ಕಡುಪುಡಯ್ “ ಕೃತಿಯ ಕರ್ತೃ - ನಕ್ಕಿರರ್.
  • ಕ್ರಿ.ಪೂ.ಎರಡನೇ ಶತಮಾನದಲ್ಲಿ ತಮಿಳು ಭಾಷೆಗೆ ಬಳಸಿದ ಲಿಪಿ - ಬ್ರಾಹ್ಮಿ.
  • ಸಂಗಂ ಯುಗದಲ್ಲಿ ಮುಖ್ಯ ಉಧ್ಯಮ - ವಸ್ತ್ರ ಉದ್ಯಮ .
  • ಕರಿಕಾಳ ಚೋಳನ ವಿಜಯಗಳನ್ನ ವಿವರಿಸಿದ ಗ್ರಂಥ - ಪಟ್ಟಿನ ಪಾಲೈ .
  • ಕನ್ನಗಿ ದೇವಾಲಯದ ಪ್ರಾರಂಭೋತ್ಸವಕ್ಕೆ ಆಗಮಿಸಿದ ಸಿಂಹಳದ ರಾಜ - ಗಜ ಬಾಹು
  • ಲಲಿತ ಕಲೆಗಳ ಕುರಿತು ಬೆಳಕು ಚೆಲ್ಲುವ ತಮಿಳು ಕೃತಿ - ಮಣಿಮೇಖಲೈ .
  • ಸಂಗರ್ ಕೊಲಾಂಡಿಯಾ ಪದದ ಅರ್ಥ - ವರ್ತಕ ಶಾಕೆಗಳು .
  • “ ಮಧುರೈ ಕಂಜಿ “ ಕೃತಿಯ ಕರ್ತೃ - ಮಾಗುಂಡಿ ಮರುಧನ್.
  • ಸಂಗಂ ಯುಗದಲ್ಲಿ ಜಾರಿಯಲ್ಲಿದ್ದ ಜಾತಿ ವ್ಯವಸ್ಥೆ ಯನ್ನು ಈ ಹೆಸರಿನಿಂದ ಕರೆಯುವರು - ತುಡಿಯನ್.
  • ಸಂಗಂ ಯುಗದಲ್ಲಿ ರಾಜನ ಆಸ್ಥಾನವನ್ನು ಈ ಹೆಸರಿನಿಂದ ಕರೆಯುವರು - ಮನ್ನಂ.
  • ತೊಂಟಿ,ಮುರಿಜನ್ ಬಂದರು ಪಟ್ಟಣಗಳು ಈ ಸಂಗಂ ರಾಜ್ಯದಲ್ಲಿದ್ದವು - ಚೇರನ್
  • ಪಾಂಡ್ಯರ ರಾಜಧಾನಿ ಮಧುರೈ ಈ ನದಿಯ ದಂಡೆಯಲ್ಲಿದೇ - ವೈಗೈ ನದಿ .
  • ಈ ಮಾರ್ಗದ ಮೂಲಕ ಭಾರತ ಈಜಿಪ್ಟ್ ನೊಂದಿಗೆ ವ್ಯಾಪಾರ ಸಂಬಂಧಗಳನ್ನು ನಡೆಸುತ್ತಿತ್ತು -ಕೆಂಪು ಸಮುದ್ರ ಮಾರ್ಗ .
  • ಕರಿಕಾಳ ಚೋಳನ ತಂದೆಯ ಹೆಸರು - ಇಲಾಂಜಿತ್ ಸೇನಿ.
  • ಸಂಗಂ ಯುಗದಲ್ಲಿ ಗೆಲುವಿನ ದೇವತೆಯಾಗಿ ಪೂಜಿಸುತ್ತಿದ್ದ ದೇವತೆ - ಕೊರವೈ.
  • ಸಂಗಂ ಯುಗದಲ್ಲಿ ವೆಲ್ವಿ ಪದದ ಅರ್ಥ - ಯಜ್ಞ.
  • ಕೊರಗೈ ಬಂದರು ಈ ನದಿಯ ತೀರದಲ್ಲಿತ್ತು - ತಾಂಬ್ರವರ್ಣಿ .
  • ಕರ್ನಾಟಕ ಪದವನ್ನು ಪರಿಚಯಿಸುವ ತಮಿಳು ಗ್ರಂಥ - ಶಿಲಪ್ಪಾದಿಕಾರಂ ಹಾಗೂ ತೋಳ್ಳಯಿಪ್ಪಿ .
  • ಶಿಲಪ್ಪಾದಿಕಾರಂ ಕರ್ನಾಟಕ ಪದವನ್ನು ಈ ಹೆಸರಿನಿಂದ ಪರಿಚಯಿಸಿದೆ - ಕರುನಾಡರ್ .
  • ವೆಳ್ವಕುಡಿ ತಾಮ್ರ ಶಾಸನದ ಕರ್ತೃ - ಪರಾಂತಕ ಚೋಳ .
  • ಚೋಳರ ಶಾಸನಗಳು ಕರ್ನಾಟಕ ಪದವನ್ನು ಹೀಗೆ ಸೂಚಿಸಿದೆ - ಕನ್ನಾಟ ಅಥವಾ ಕನ್ನಾಟಕ .
  • “ ಮಧುರೈ ಕೊಂಡ “ ಎಂಬ ಬಿರುದುಳ್ಳ ಅರಸ - ಒಂದನೇ ಪರಾಂತಕ ಚೋಳ .

ಶಾತವಾಹನರು

ಶಾತವಾಹನರು

ಶಾತವಾಹನರು
  • ಕರ್ನಾಟಕವನ್ನಾಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ - ಶಾತವಾಹನರು .
  • ಆರಂಭದಲ್ಲಿ ಶಾತವಾಹನರು ಇವರ ಸಾಮಂತರಾಗಿದ್ದರು - ಮೌರ್ಯರು .
  • ಶಾತವಾಹನರ ರಾಜಧಾನಿ - ಪೈಥಾನ್ ಅಥವಾ ಪ್ರತಿಷ್ಠಾನ್.
  • ಶಾತವಾಹನರು ಸುಮಾರು - 460 ವರ್ಷ ಸಾಮ್ರಾಜ್ಯ ಆಳಿದರು .
  • ಶಾತವಾಹನರು ಈ ಮೂಲದವರು - ಆಂಧ್ರ ಮೂಲದವರು .
  • ಪ್ರಸ್ತುತ ಪೈಥಾನ್ ಈ ಪ್ರದೇಶದಲ್ಲಿದೆ - ಮಹಾರಾಷ್ಟ್ರ ಜೌರಂಗಬಾದ್ ಜಿಲ್ಲೆಯಲ್ಲಿದೆ .

ರಾಜಕೀಯ ಇತಿಹಾಸ
  • ಶಾತವಾಹನ ವಂಶದ ಸ್ಥಾಪಕ ದೊರೆ - ಸಿಮುಖ .
  • ಸಿಮುಖನ ರಾಜಧಾನಿ - ಪೈಥಾನ್ .
  • ಸಿಮುಖ ಮೌರ್ಯ ದೊರೆ ನಿಶಿರ್ಮನನ್ನು ಕೊಂದು ಸ್ವತಂತ್ರನಾದ.
  • ಸಿಮುಖನನ್ನು “ ರಾಜ ಸಿಮುಖ ಶಾತವಾಹನ “ ಎಂದು ವರ್ಣಿಸಿರುವ ಶಾಸನ - ನಾನಾ ಘಾಟ್ ಶಾಸನ .
  • ಸಿಮುಖನಿಗೆ “ ಶಾತವಾಹನ “ ಎಂಬ ಹೆಸರನ್ನು ಕೊಟ್ಟಿರುವ ಗ್ರಂಥ - ಜೈನ ಗ್ರಂಥ .
  • ಸಿಮುಖನ ನಂತರ ಅಧಿಕಾರಕ್ಕೆ ಬಂದವರು - ಇವನ ತಮ್ಮ ಕೃಷ್ಣ .
  • ಒಂದನೇ ಶಾತಕರ್ಣಿ ಈತ - ಸಿಮುಖನ ಮಗ .
  • ನಾನಾ ಘಾಟ್ ಶಾಸನದ ಕರ್ತೃ - ನಾಗನೀಕ .
  • “ ದಕ್ಷಿಣ ಪಥ ಸಾರ್ವಬೌಮ “ ಹಾಗೂ ಅಪ್ರತ್ರಿಹಿತ ಎಂಬ ಬಿರುದುಳ್ಳ ಅರಸ - ಒಂದನೇ ಶಾತಕರ್ಣಿ .
  • ಶಾತವಾಹನರ ಏಳನೇ ದೊರೆ - ಹಾಲ .
  • ಪ್ರಾಕೃತದ ಶೃಂಗಾರ ಕಾವ್ಯದ ಹೆಸರು - ಗಥಾಸಪ್ತಸತಿ .
  • ಗಥಾಸಪ್ತಸತಿ ಕೃತಿಯ ಕರ್ತೃ - ಹಾಲ
  • “ ಬೃಹತ್ ಕಥಾ ಅಥವಾ ವಡ್ಡ ಕಥಾ “ ಕೃತಿಯ ಕರ್ತೃ - ಗುಣಾಡ್ಯ .
  • ಹಾಲನ ಪತ್ನಿಯ ಹೆಸರು - ಲೀಲಾವತಿ .
  • ಹಾಲನ ರಾಜ್ಯ ಭಾಷೆ - ಪ್ರಾಕೃತ,
  • ಶಾತವಾಹನರ ಪ್ರಸಿದ್ಧ ದೊರೆ - ಗೌತಮೀಪುತ್ರ ಶಾತಕರ್ಣಿ
  • ಗೌತಮೀಪುತ್ರ ಶಾತಕರ್ಣಿಯ ತಾಯಿಯ ಹೆಸರು - ಗೌತಮೀ ಬಾಲಾಶ್ರೀ
  • ಗುಹಾಂತರ ನಾಸಿಕ್ ಶಾಸನದ ಕರ್ತೃ -ಗೌತಮೀ ಬಾಲಾಶ್ರೀ
  • ತ್ರೈ ಸಮುದ್ರ ತೋಯಾ ಪಿತಾವಾಹನ ಹಾಗೂ ಶಾತವಾಹನ ಕುಲ ಪ್ರತಿಷ್ಠಾಪಿತ ಎಂಬ ಬಿರುದುಳ್ಳ ಅರಸ -ಗೌತಮೀಪುತ್ರ ಶಾತಕರ್ಣಿ
  • ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಹೊಂದಿದ್ದ ಶಾತವಾಹನ ದೊರೆ -ಪುಲುಮಾವಿ
ಶಾತವಾಹನರ ಸಾಂಸ್ಕೃತಿಕ ಕೊಡುಗೆಗಳು
ಆಡಳಿತ:-


  • ಶಾತವಾಹನರ ಆಡಳಿತದ ಮುಖ್ಯಸ್ಥ -ರಾಜ
  • ಪ್ರಾಂತ್ಯದ ರಾಜ್ಯಪಾಲ - ಅಮಾತ್ಯ
  • ರಾಜನ ಆಪ್ತ ಸಲಹೆಗಾರ ಹಾಗೂ ಸಹಾಯಕ -ರಾಜಮಾತ್ಯ
  • ಮುಖ್ಯಕಾರ್ಯದ ನಿರ್ವಾಹಕ ಅಧಿಕಾರಿ -ಮಹಾಮಾತ್ಯ
  • ಸರಕು ಸರಂಜಾಮುಗಳ ಮೇಲ್ವಚಾರಕ -ಬಂಡಾರಿಕ
  • ಕೋಶಾಧ್ಯಕ್ಷ - ಹೆರಾಣಿಕ
  • ವಿದೇಶಾಂಗ ವ್ಯವಹಾರದ ರಾಯಭಾರಿ -ಮಹಾಸಂಧಿ ವಿಗ್ರಾಹಿತ
  • ರಾಜನ ಆಜ್ಞೆಗಳನ್ನು ಬರೆಯುವವನು - ಲೇಖಕ
  • ಸಾಮ್ರಾಜ್ಯವನ್ನು ಅಹರ ,ವಿಷಯ,ನಿಗಮ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು
  • ಅಹರದ ಮುಖ್ಯಸ್ಥ -ಅಮಾತ್ಯ
  • ಪಟ್ಟಣಗಳ ಆಡಳಿತ ವ್ಯವಸ್ಥೆ -ನಿಗಮದ ಅಧೀನದಲ್ಲಿ
  • ಗ್ರಾಮದ ಮೇಲ್ವಿಚಾರಕ -ಗ್ರಾಮೀಣಿ
  • ಸಾಮಾಜಿಕ ಸ್ಥಿತಿಗತಿ
  • ಸಮಾಜದಲ್ಲಿದ್ದ ಕುಟುಂಬದ ಪದ್ದತಿ -ಅವಿಭಕ್ತ ಕುಟುಂಬ ಪದ್ದತಿ
  • ಸಮಾಜದಲ್ಲಿ ಮಹಿಳೆಯರು ಪಡೆಯುತ್ತಿದ್ದ ಬಿರುದುಗಳು - ಮಹಾಭೋಜ, ಮಹಾರತಿ,ಸೇನಾಪತಿ,
  • ಶಾತವಾಹನರ ರಾಜವಂಶ -ಮಾತೃ ಪ್ರಧಾನ
  • ಸಮಾಜದ ವಿಭಾಗಗಳು -ಮಹಾರತಿ ,ಮಹಾಭೋಜಕ , ಸೇನಾಪತಿ ,ಹಾಗೂ ಸಾಮಾನ್ಯ ವರ್ಗ

ಆರ್ಥಿಕ ಸ್ಥಿತಿಗತಿ

  • ಶಾತವಾಹನರ ಮುಖ್ಯ ಕಸುಬು -ಕೃಷಿ
  • ರಾಜ್ಯದ ಆದಾಯದ ಮೂಲ - ಭೂಕಂದಾಯ
  • ಜನತೆ ರಾಜ್ಯಕ್ಕೆ ಕೊಡಬೇಕಾದ ಭಾಗ - 1/6
  • ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, - ಯುರೋಪ್ ಹಾಗೂ ರೋಮ್
  • ಇವರ ಕಾಲದ ವೃತ್ತಿ ಸಂಘಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಶ್ರೇಣಿ .
  • ವೃತ್ತಿ ಸಂಘದ ಮುಖ್ಯಸ್ಥನನ್ನ ಈ ಹೆಸರಿನಿಂದ ಕರೆಯಲಾಗಿದೆ - ಶೇಠಿ .
  • ಶಾತವಾಹನರ ಪ್ರಮುಖ ನಾಣ್ಯಗಳು - ದಿನಾರ , ಸುವರ್ಣ ( ಚಿನ್ನ ) ಕುಷಣ ( ಬೆಳ್ಳಿ ) ಹಾಗೂ ಕರ್ಪಣ , ದ್ರಮ್ಮ , ಪಣ ಗದ್ಯಾಣ .
  • ಹಾಲನ ಗಾಥಸಪ್ತ ಸತಿಯು ಈ ದೇವರ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ - ಶಿವ .
  • ಶಾತವಾಹನರ ಪೋಷಣಿಯಲ್ಲಿದ್ದ ಭಾಷೆ - ಪ್ರಾಕೃತ ಮತ್ತು ಸಂಸ್ಕೃತ .
  • ಶಾತವಾಹನರ ಆಡಳಿತ ಭಾಷೆ - ಪ್ರಾಕೃತ .
  • ಪ್ರಭೂತಸಾರ , ರಾಯನಸಾರ , ಸಮಯಸಾರ , ಪ್ರವಚನಸಾರ ಮತ್ತು ದ್ವಾದಶನು ಪ್ರೇಕ್ಷ ಕೃತಿಗಳ ಕರ್ತೃ - ಜೈನ ಪಂಡಿತ ಕಂದಾಚಾರ್ಯ .
  • “ ಕವಿ ಪುಂಗವ “ ಎಂಬ ಬಿರುದು ಪಡೆದ ದೊರೆ - ಹಾಲ .
  • ಹಾಲನ ಸಿಲೋನ್ ದಂಡೆ ಯಾತ್ರೆಗಳನ್ನು ತಿಳಿಸುವ ಕೃತಿ - ಲೀಲಾವತಿ .
  • ಗುಣಾಡ್ಯನ ಬೃಹತ್ ಕಥಾ ಈ ಭಾಷೆಯಲ್ಲಿದೆ - ಪೈಶಾಚ .
  • “ ಮಾಧ್ಯಮಿಕ ಸೂತ್ರ “ ಕೃತಿಯ ಕರ್ತೃ - ನಾಗಾರ್ಜುನ .
  • “ಕಾತಂತ್ರ ಸಂಸಕೃತದ “ ವ್ಯಾಕರಣ ಕೃತಿಯ ಕರ್ತೃ - ಸರ್ವವರ್ಮ.
  • “ ಅಮರಾವತಿಯ ಸ್ಥೂಪ “ ಇವರ ಕಾಲಕ್ಕೆ ಸೇರಿದ್ದು - ಶಾತವಾಹನರು .
  • ಶಾತವಾಹನರ ನಿರ್ಮಿಸಿದ ಸ್ಥೂಪಗಳಲ್ಲಿ ಅತ್ಯಂತ ದೊಡ್ಡದ್ದು - ಅಮರಾವತಿ ಸ್ಥೂಪ .
  • ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು - ಶಾತವಾಹನರು .
Extra Tips :-
  • ಶಾತವಾಹನರನ್ನು “ ಕುಂತಲ ದೊರೆ “ ಎಂದು ಸಂಭೋದಿಸಿದ ಕೃತಿಯ ಹೆಸರೇನು - ರಾಜ ಶೇಖರ ಕವಿಯ “ಕಾವ್ಯ ಮಿಮಾಂಸೆ “ .
  • ಹಾಲ ದೊರೆಯ ಇನ್ನೊಂದು ಹೆಸರು - ಹಾಲಾಯುಧ .
  • ಬನವಾಸಿಯ ಪ್ರಾಚೀನ ಹೆಸರು - ವೈಜಯಂತಿ ಪುರ ( ವಿಜಯ ಪಕಾಕೆಪುರ ) .
  • ಪುಲುಮಾಯಿಯ ರಾಜಧಾನಿ - ಬನವಾಸಿ .
  • ಶಾತವಾಹನರ ರಾಜ್ಯದ ವಿಭಾಗಳಳು - ಜನಪದ ( ಡಿವಿಷನ್ ) ವಿಷಯ ( ಜಿಲ್ಲೆ ) ಸೀಮೆ ( ತಾಲ್ಲೂಕ್ ).
  • ಶಾತವಾಹನರ ಸಾಗರೋತ್ತರ ವ್ಯಾಪಾರದ ಕುರಿತು ಬೆಳಕು ಚೆಲ್ಲುವ ಗ್ರೀಕ್ ಕೃತಿ - ಅನಾಮದೇಯ - Periples of the Erithriyan Sea .
  • ಗುಪ್ತರು ಮತ್ತು ಚೋಳರ ಕಾಲದ “ ಬೃಹತ್ ಭಾರತದ “ ಸಾಧನೆಗೆ ನಾಂದಿ ಹಾಡಿದವರು - ಶಾತವಾಹನರು .
  • “ ಬಾರತದ ಪ್ರಪ್ರಥಮ ಶಿವದೇವಾಲಯ “ ಎಂದು ಪ್ರಸಿದ್ದಿಯನ್ನು ಪಡೆದ ದೇವಾಲಯ - ತಾಳಗುಂದದ ಏಕ ಮಂಟಪದ ಶಿವ ದೇವಾಲಯ “ .
  • - ತಾಳಗುಂದದ ಏಕ ಮಂಟಪದ ಶಿವ ದೇವಾಲಯ ಇವರ ಕಾಲಕ್ಕೆ ಸೇರಿದೆ - ಶಾತವಾಹನರು .
  • ಶಾತವಾಹನರ ವರ್ತಕರನ್ನು ಈ ಹೆಸರಿನಿಂದ ಕರೆಯಲಾಗಿದೆ - ನೈಗಾಮ .
  • ಆಂದ್ರ ಭೃತೃಗಳು ಎಂದು ಕರೆಯಲ್ಪಟ್ಟವರು - ಶಾತವಾಹನರು .
  • ಶಾತವಾಹನ ಶಕೆಯ ಆರಂಭ - ಕ್ರಿ.ಶ.78.
  • ಶಾತವಾಹನ ಶಕೆಯನ್ನು ಆರಂಭಿಸಿದವರು - ಶಾತವಾಹನರು ( ಹಾಲ ) .
  • ತ್ರೈಸಮುದ್ರತೋಯ ಪೀತವಾಹನದ ಅರ್ಥ - ಮೂರು ಸಮುದ್ರಗಳ ನೀರನ್ನು ಕುಡಿದು ಕುದುರೆಯನ್ನು ವಾಹನವಾಗಿ ಪಡೆದವ .
  • ಶಾತವಾಹನರ ಪ್ರಸಿದ್ದ ಕಲಾ ಕೇಂದ್ರಗಳು - ಕರ್ಲೆ , ಅಜಂತ . ಅಮರಾವತಿ , ನಾಗರ್ಜುನ ಕೊಂಡ , ಘಂಟಸಾಲಾ ,ನಾಸಿಕ್ , ಪೈಟಾನ್ .
  • ಮೌರ್ಯರ ಪತನಾ ನಂತರ ದಖನ್ ಪ್ರಸ್ಥಭೂಮಿಯಲ್ಲಿ ಪ್ರಪ್ರಥಮ ಐತಿಹಾಸಿಕ ಹಿರಿಯ ಸಾಮ್ರಾಜ್ಯ ವನ್ನು ಸ್ಥಾಪಿಸಿದವರು - ಶಾತವಾಹನರು .
  • ಮೂರು ಸಾಗರಗಳ ಒಡೆಯರು ಎಂದು ಕರೆಯಲ್ಪಟ್ಟವರು - ಶಾತವಾಹನರು .
  • ಶಾತವಾಹನರು ಪ್ರಾರಂಭದಲ್ಲಿ - ಮೌರ್ಯರ ಸಾಮಂತರಾಗಿದ್ದರು .
  • ಎಲ್.ಡಿ.ಬಾರ್ನೆಟ್ ಪ್ರಕಾರ ಶಾತವಾಹನರ ಮೊದಲ ರಾಜಧಾನಿ ಶೀ ಕಾಕುಲು ಹಾಗೂ ನಂರದ ರಾಜಧಾನಿ - ಧನ್ಯ ಕಟಕ .
  • ಶಾತವಾಹನರ ಲಾಂಛನ - ಕುದುರೆ .

ಶಾತವಾಹನರ ಏಳಿಗೆಗೆ ಕಾರಣ :-
  • ಮೌರ್ಯರ ಸಾಮ್ರಾಜ್ಯದ ಪತನ
  • ದಖನ್ನ್ ನಲ್ಲಿ ಉಂಟಾದ ಆರ್ಥಿಕ ಸಾಮಾಜಿಕ ಬದಲಾವಣಿ .
  • ಮೌರ್ಯರ ಸಂಬಂಧದಿಂದಾಗಿ ಉಂಟಾದ ಕಬ್ಬಿಣದ ಬಳಕೆ ಹಾಗೂ ಅದರ ಪರಿಚಯ .
  • ದಕ್ಷಿಣ ಭಾರತದಲ್ಲಿ ಹೆಚ್ಚಾದ ಕೃಷಿ ವಿಸ್ತರಣಿ .
  • ಶಾತವಾಹನ ಎಂಬ ಪದವು “ ಆಸ್ಟ್ರೋ ಏಷ್ಯಾಟಿಕ್ “ ಭಾಷೆಯ ಪದವೆಂದೂ ಪರ್ಶಿಯ ಅಥವಾ ಸಾತ ಎಂದರೆ ಕುದುರೆ ಎಂದು ಹಾಗೂ ್ದರಿಂದ ಅವರು ವಾಹನವಾಗುಳ್ಳವರೆಂದು ಅಭಿಪ್ರಾಯ ಪಡಲಾಗಿದೆ .
  • ಶಾತವಾಹನರ ಮೂಲ ನೆಲೆ - ಸಾತ ನಿಹಾರ ವಾಗಿತ್ತು ಎಂದು ತಿಳಿಸುವ ಶಾಸನಗಳು ಮಾಯಾಕಮೋನಿ ಮತ್ತು ಹಿರೇಹಡಗಲಿ ಶಾಸನ .
  • ಪುರಾಣಗಳಲ್ಲಿ ಸಿಮುಖನನ್ನು ಈ ಹೆಸರಿನಿಂದ ಕರೆಯಲಾಗಿದೆ - ವೃಷಲ .
  • ಸಿಮುಖನ್ನ “ಏಕ ಬ್ರಾಹ್ಮಣ “ ಎಂದು ಕರೆದ ಶಾಸನ - ನಾಸಿಕ್ ಶಾಸನ .
  • ಗೌತಮಿ ಪುತ್ರ ಶಾತಕರ್ಣಿಯ ಕಾಲಾವಧಿ - ಕ್ರಿ.ಪೂ.202 ಗಿಂದ 186 ರವರೆಗೆ .
  • ದಕ್ಷಿಣ ಪಥೇಶ್ವರ ಎಂಬ ಬಿರುದ್ದನ್ನು ತನ್ನ ಪ್ರಭುತ್ವದ ಸಂಕೇತವಾಗಿ ಧರಿಸಿದ್ದ ಶಾತವಾಹನ ದೊರೆ - ಗೌತಮಿಪುತ್ರ ಶಾತಕರ್ಣಿ .
  • ಹಾಲನ ದಂಡ ನಾಯಕನ ಹೆಸರು - ವಿಜಯಾನಂದ .
  • ತಾನೋಬ್ಬನೆ ಬ್ರಾಹ್ಮಣ ಎಂದು ಹೇಳಿಕೊಂಡ ಶಾತವಾಹನ ಅರಸ - ಗೌತಮಿ ಪುತ್ರ ಶಾತಕರ್ಣಿ .
  • ಗೋವರ್ದನ ಜಿಲ್ಲೆಯಲ್ಲಿ “ ಬೆನಕಟಕ “ ಎಂಬ ಪಟ್ಟಣಕ್ಕೆ ತಳಹದಿಯನ್ನು ಹಾಕಿದವರು - ಗೌತಮಿ ಪುತ್ರ ಶಾತಕರ್ಣಿ .
  • “ ನವನಗರ “ ಎಂಬ ಪಟ್ಟವನ್ನು ನಿರ್ಮಿಸಿದವರು - ಎರಡೆನೇ ಪುರುಮಾಯಿ .
  • ‘ ನವನಗರ ಸ್ವಾಮಿ “ ಎಂದು ಬಿರುದನ್ನು ಪಡೆದವನು - 2 ನೇ ಪುಲುಮಾಯಿ .

ಶಾತವಾಹನರ ಪತನಕ್ಕೆ ಕಾರಣಗಳು :-
  • ಶಕರ ದಾಳಿ
  • ಬುಡಕಟ್ಟಿನವರಿಂದ ಶಾತವಾಹನ ಪ್ರದೇಶಗಳ ಮೇಲೆ ಆಕ್ರಮಣ.
  • ನಾಗಾಗಳ ದಾಳಿ
  • ಪಲ್ಲವರು ಮತ್ತು ವಾಕಾಟಕರ ಪ್ರಬಲತೆ .
EXTRA TIPS

  • ಶಾತವಾಹನರ ಕಾಲದ ಅತ್ಯಂತ ಕಿರು ಆಡಳಿತದ ಘಟಕ - ಗ್ರಾಮ
  • ಶಾತವಾಹನರ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸೇನಾ ನಿಯಂತ್ರಣ ವ್ಯವಸ್ಥೆ - ಗೌಲವೆಯಾ .
  • ಶಾತವಾಹನರ ಪ್ರಮುಖ ತೆರಿಗೆಗಳು - ದೆಯ , ಮೆಯ , ಭಾಗ , ಕರ
  • ರಾಜನನನ್ನು ತಾಯಿಯ ಹೆಸರಿನಿಂದ ಕರೆಯುವ ವಾಡಿಕೆಯನ್ನು ಇಟ್ಟು ಕೊಂಡಿದ್ದ ಅರಸರು - ಶಾತವಾಹನರು .
  • ಗ್ರೀಕರು ಹಾಗೂ ಶಕರಿಂದ ಪ್ರಭಾವಿತವಾದ ಶಾತವಾಹನರು ಟಂಕಿಸಿದ ಬೆಳ್ಳಿಯ ನಾಣ್ಯದ ಹೆಸರು - ಕಾರ್ಪಣ
  • ಶಾತವಾಹನರ ರಾಜಕುಮಾರ ಗುರುವಾಗಿದ್ದ ಜೈನರು - ಕಂದಕಂದಚಾರ್ಯ .
  • “ ಚತ್ಸುಸ್ಸಮಯ ಸಮುದ್ದರಣ “ ಎಂಬ ಕೀರ್ತಿಗೆ ಪಾತ್ರರಾದ ಅರಸರು - ಶಾತವಾಹನರು .
  • ತಾಳಗುಂದ ಅಗ್ರಹಾರದ ನಿರ್ಮಾತೃಗಳು - ಶಾತವಾಹನರು .
  • ಶಾತವಾಹನರ ಕಾಲದಲ್ಲಿ ಪ್ರಸಿದ್ದಿಯಲ್ಲಿದ್ದ ಲಿಪಿ - ಬ್ರಾಹ್ಮಿಲಿಪಿ .
  • ಜನಪ್ರಿಯತೆಯಲ್ಲಿ ರಾಮಯಾಣ ಮತ್ತು ಮಹಾ ಭಾರತಗಳಿಗೆ ಸರಿಸಮಾನವಾಗಿ ನಿಲ್ಲ ಬಲ್ಲ ಶಾತವಾಹನರ ಕಾಲದ ಕೃತಿ - ಬೃಹತ್ ಕಥಾ .
  • “ಕಾತಂತ್ರ “ ವ್ಯಾಕರಣ ಗ್ರಂಥದ ಕರ್ತೃ - ಸರ್ವಧರ್ಮ
  • ಶಾತವಾಹನರ ಕಾಲದ ಚೈತ್ಯಗಳು ವಿಹಾರಗಳು ಹಾಗೂ ಸ್ಥೂಪಗಳನ್ನು “ಶಿಲಾವಾಸ್ತುಶಿಲ್ಪ “ ಎಂದು ಕರೆದ ಯಾಂತ್ರಿಕ - ಪೆರ್ಸಿ ಬ್ರೌನ್ .
  • ಚೈತ್ಯ ಎಂದರೆ - ಪ್ರಾರ್ಥನಾ ಗೃಹ .
  • ಶಾತವಾಹನರ ಕಾಲದಲ್ಲಿ ಉಗಮವಾದ ಚಿತ್ರಕಲಾ ಶೈಲಿ - ಅಜಾಂತ ಚಿತ್ರ ಕಲಾ ಶೈಲಿ .
  • ವಿಹಾರ ಎಂದರೆ - ಬೌದ್ಧ ಬಿಕ್ಷುಗಳ ನಿವಾಸ .
  • ಸ್ಥೂಪ ಎಂದರೆ - ಬುದ್ಧನ ಯಾವುದಾದರೊಂದು ಅವಶೇಷಗಳ ಮೇಲೆ ನಿರ್ಮಾಣವಾದ ವೃತ್ತಾಕಾರದ ನಿರ್ಮಾಣ .
  • ಸಿಮುಖನು ಯಾವ ಸಂತತಿಯ ದೊರೆ, ಯಾರನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪಿಸಿದ -ಕಣ್ವ ಸಂತತಿಯ ಕೊನೆಯ ಅರಸ , ಸುಶರ್ಮ
  • ಶಾತವಾಹನರು ಈ ಜಾತಿಗೆ ಸೇರಿದವರು - ಬ್ರಾಹ್ಮಣ
  • ಶಾತವಾಹನರ ಮೂಲದ ಕುರಿತು ಮಾಹಿತಿ ನೀಡಿರುವ ಪುರಾಣಗಳು - ಮತ್ಸ್ಯ ಪುರಾಣ ವಿಷ್ಣು ಪುರಾಣ
  • ಶಾತವಾಹನರ ಕೊನೆಯ ಪ್ರಮುಖ ದೊರೆ - ಯಜ್ಞಶ್ರೀ ಶಾತಕರ್ಣಿ
  • ಶಾತವಾಹನರ ಕೊನೆಯ ದೊರೆ - ಎರಡನೇ ಪುಲಿಮಾಯಿ
  • ಸಿಮುಖನ ಆರಂಭದ ರಾಜಧಾನಿ - ಶ್ರೀ ಕಾಕುಲಂ
  • ಡಾ, ಭಂಡಾರ್ಕರ್ ರವರ ಪ್ರಕಾರ ಆಂಧ್ರದಲ್ಲಿನ ಶಾತವಾಹನರ ರಾಜಧಾನಿ - ಧಾನ್ಯಕಟಿಕಾ /ಧರಣಿಕೋಟೆ
  • ಶಾತವಾಹನರ ಸಾಹಿತಿ ದೊರೆ - ಹಾಲ
  • ದಖ್ಖನ್ ಭಾರತದಲ್ಲಿ ಮೊದಲು ನಾಣ್ಯಗಳನ್ನು ಟಂಕಿಸಿದ ಮನೆತನ - ಶಾತವಾಹನ
  • ಪ್ರೇಷ ಎಂಬ ಕೃತಿಯ ಕರ್ತೃ - ದ್ವಾದಸನ
  • ದಿ ಜಿಯೋಗ್ರಫಿ ಕೃತಿಯ ಕರ್ತೃ - ಟಾಲೆಮಿ
  • ಶಾತವಾಹನರ ಕುಲ ,ಯಶಸ್ಸು ಪ್ತತಿಷ್ಠಾಪನಾಕಾರ ಎಂಬ ಬಿರುದನ್ನು ಹೊಂದಿದ್ದ ದೊರೆ,- ಗೌತಮೀಪುತ್ರಶಾತಕರ್ಣಿ
  • ದಕ್ಷಿಣ ಪತಾಪತಿ ಎಂಬ ಬಿರುದನ್ನು ಹೊಂದಿದ್ದ ದೊರೆ - 1ನೇ ಶಾತಕರ್ಣಿ
  • ಇವರ ಮೊದಲ ಆಡಳಿತ ವಿಭಾಗ - ಆಹಾರ /ಪ್ರಾಂತ್ಯ
  • ಆಹಾರವನ್ನು ನೋಡಿಕೊಳ್ಳುತ್ತಿದ್ದವರು - ಅಮಾತ್ಯ
  • ಶಾತವಾಹನರ ಅತ್ಯಂತ ಕಿರಿಯ ಆಡಳಿತ ಘಟಕ - ಗ್ರಾಮ
  • ಇವರ ಕಾಲದ ಮುಖ್ಯ ಬಂದರುಗಳು - ಕಲ್ಯಾಣ, ಸೋಪಾರ, ಬಲಿಗಜ ,ಠಣಕ,
  • ವಿಹಾರವನ್ನು ಈ ಹೆಸರಿನಿಂದ ಕೆರೆಯುತ್ತಿದ್ದರು - ಸಂಘಾರಾಮ
  • ಕಾರ್ಲೇಯ ಚೈತ್ಯದ ನಿರ್ಮಾತೃ - ಭೂತಪಾಲಶೆಟ್ಟಿ
  • ಆಂಧ್ರದ ನಾಗಾರ್ಜುನಕೊಂಡದ ಪ್ರಸ್ತುತ ಹೆಸರು - ವಿಜಯಪುರಿ
  • ಶಾತವಾಹನ ಸಾಮ್ರಾಜ್ಯದ ಸ್ಥಾಪನೆಯಾದ ವರ್ಷ - ಕ್ರಿ.ಪೂ. 235
  • ಶಾತವಾಹನರ ನಂತರ ದ.ಭಾರತದಲ್ಲಿ ಪ್ರಸಿದ್ಧರಾದವರು - ಕದಂಬರು
  • ಇವರು ಈ ಧರ್ಮವನ್ನು ಅನುಸರಿಸಿದರು - ವೈದಿಕ ಧರ್ಮ
  • ಈ ಕಾಲದ ರಾಜ್ಯಗಳು ಇವರ ಆಡಳಿತದಲ್ಲಿತ್ತು - ಅಮಾತ್ಯ
  • ಮೊದಲ ಶಾತಕರ್ಣಿಯ ಪತ್ನಿಯ ಹೆಸರು - ನಾಗವಿಕ
  • ಮೊದಲ ಶಾತಕರ್ಣಿಯೊಂದಿಗೆ ಯುದ್ಧ ಮಾಡಿದ ಕಳಿಂಗ ಅರಸ - ಖಾರವೇಲ
  • ಗೌತಮೀಪುತ್ರ ಶಾತಕರ್ಣಿ ಶಾತವಾಹನರ - 23 ನೇ ಅರಸ
  • ಏಕಬ್ರಾಹ್ಮಣ , ಆಗಮನಿಲಯ ,ಏಕಶೂರ ,ಏಕಧನುರಾರ್ಧ ಎಂಬ ಬಿರುದನ್ನು ಹೊಂದಿದ ಶಾತವಾಹನ ದೊರೆ.- ಗೌತಮೀಪುತ್ರ ಶಾತಕರ್ಣಿ
  • ಕಾಂಬೋಜ ರಾಜ್ಯವನ್ನು ಸ್ಥಾಪಿಸಿದ ದೊರೆ - ಕೌಂಡಿನ್ಯ
  • ಮೌಕದಾನಿ ಶಾಸನದ ಕರ್ತೃ - ಮೂರನೇ ಪುಲುಮಾರು
  • ಇವರ ಕಾಲದಲ್ಲಿ ಚಿನ್ನದ ನಾಣ್ಯವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಸುವರ್ಣ
  • ಕಾಮಸೂತ್ರದ ಕರ್ತೃ - ವಾತ್ಸಾಯನ ( ಸಂಸ್ಕೃತ ಕವಿ)
  • ಪ್ರಾಕೃತ ಭಾಷಾ ಇತಿಹಾಸದಲ್ಲಿ ಇವರ ಕಾಲ ಸುವರ್ಣಯುಗವಾಗಿದೆ. - ಶಾತವಾಹನರ
  • ಇವರ ಕಾಲದ ಸೇನಾ ಶಿಬಿರಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಕಟಕ
  • ಇವರ ಕಾಲದ ಪ್ರಮುಖ ಪ್ರಯಾಣಸಾಧನ - ಎತ್ತಿನಗಾಡಿ
  • ಕಾಲದಲ್ಲಿ ರಾಜ್ಯಾಡಳಿತದಲ್ಲಿ ಭಾಗವಹಿಸಿದ ಮಹಿಳೆಯರು -ಗೌತಮೀಬಾಲಶ್ರೀ, ನಾಗನಿಕ
  • ‘The Guide to Geography’ ಕೃತಿಯ ಕರ್ತೃ - ಟಾಲೆಮಿ
  • ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ದಾನವಾಗಿ ನೀಡಿದ ವಂಶ -ಶಾತವಾಹನರು
  • ಶಕಯವನ ಪಲ್ಲವ ನಿಸೂಧನ ಎಂಬ ಬಿರುದನ್ನು ಹೊಂದಿದವರು - ಗೌತಮೀಪುತ್ರ ಶಾತಕರ್ಣಿ
  • ಅಶೋಕನ ಈ ಶಾಸನದಲ್ಲಿ ಶಾತವಾಹನರು ಆಂಧ್ರ ಭೃತ್ಯರು ಎಂದು ಕರೆದಿದೆ. – 12 ನೇ ಶಾತವಾಹನ
  • ಅಶೋಕನ ಸಮಕಾಲೀನ ಶಾತವಾಹನ ದೊರೆ. - ಕೃಷಣ
  • ಇವರ ಕಾಲದ ಗ್ರಾಮಾಧಿಕಾರಿಗಳನ್ನು ಈ ಹೆಸರಿನಿಂದ ಕೆರಯುತ್ತಿದ್ದರು - ಮಹಾ ಆರ್ಯಕರು
  • ಶಾತವಾಹನ ಕಾಲದ ಉಗ್ರಾಣಾಧಿಕಾರಿಗಳು -ಭಂಡಾರಕರು
  • ಇವರ ಕಾಲದ ಹಣಕಾಸಿನ ಆಡಳಿತಾದಿಕಾರಿಗಳು - ಹಿರಣ್ಯಕರು
  • ಭೂ ದಾಖಲಾತಿ ಅಧಿಕಾರಿಗಳು -ನಿಬಂಧಕರು
  • ಇವರ ಸಮಾಜದಲ್ಲಿ ವಿಜೋತ್ತಮರೆಂದು ಕರೆಯಲ್ಪಡುತ್ತಿದ್ದವರು - ಬ್ರಾಹ್ಮಣರು .
  • ವರ್ಣ ಸಂತರ ಎಂದರೆ - ಶೂದ್ರರ ನಡುವಿನ ವಿವಾಹ ಸಂಬಧ ಶಾತವಾಹನರ ಚಿತ್ರಕಲೆಗೆ ಬೆಳಕು ಚೆಲ್ಲುವ ಕೃತಿ - ಕುಲ್ಲವಗ