ಲೇಡಿ ವಿತ್ ದಿ ಲ್ಯಾಂಪ್(ದೀಪದ ಮಹಿಳೆ)
- ಆಧುನಿಕ
ನರ್ಸಿಂಗ್ ಹುಟ್ಟು ಹಾಕಿದವರು ಫ್ಲಾರೆನ್ಸ್ ನೈಟಿಂಗಲ್. ಅವರ ಸೇವೆಯಿಂದ ನರ್ಸಿಂಗ್
ಇಂದು ಪ್ರಮುಖ ಆರೋಗ್ಯ ವೃತ್ತಿಯೆನಿಸಿದೆ. ತನ್ನ ಧ್ಯೇಯ ಸಾಧನೆಗಾಗಿ ನೈಟಿಂಗೇಲ್
ಲಂಡನ್ನಲ್ಲಿ ಒಂದು ನರ್ಸಿಂಗ್ ಹೋಂ ಅನ್ನು ತೆರೆದರು. 1854 ರಲ್ಲಿ ಕ್ರಿಮಿಯನ್ ಯುದ್ಧ
ಆರಂಭವಾಯಿತು
. ಆಗ ಆಕೆಯನ್ನು ಸ್ಕಟರಿ ಆಸ್ವತ್ರೆಯ ನರ್ಸಿಂಗ್ ವಿಭಾಗದ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು. ಅತೀವ ಕಾಳಜಿಯಿಂದ ಆಕೆ ಗಾಯಗೊಂಡವರ ಸೇವೆ ಮಾಡಿದರು.. ರಾತ್ರಿ ವೇಳೆ, ಕೈಯಲ್ಲಿ ಲಾಂಧ್ರವನ್ನು ಹಿಡಿದು ರೋಗಿಗಳನ್ನು ನೋಡಲು ಹೋಗುತ್ತಿದ್ದುದ್ದರಿಂದ ಜನರು ನೈಟಿಂಗೇಲ್ ರನ್ನು "" ಲೇಡಿ ವಿತ್ ದಿ ಲ್ಯಾಂಪ್"" ಎಂದು ಕರೆಯತೊಡಗಿದರು...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ