Powered By Blogger

ಗುರುವಾರ, ನವೆಂಬರ್ 20, 2014

ಗಂಗರು

ಗಂಗರು

ಗಂಗರು
  • ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
  • ಗಂಗರ ರಾಜ್ಯ ಕೋಲಾರ , ತುಮಕೂರು , ಬೆಂಗಳೂರು , ಮಂಡ್ಯ ಹಾಗೂ ಮೈಸೂರನ್ನ ಒಳಗೊಂಡಿತ್ತು .
  • ಗಂಗರು ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಾಂತರಾಗಿದ್ದರು .
  • “ಕೋಲಾರ ” ಅಥವಾ “ ಕುವಲಾಲ ” ಇವರ ಆರಂಭದ ರಾಜಧಾನಿ
  • ಗಂಗರ ಎರಡನೇ ರಾಜಧಾನಿ “ ತಲಕಾಡು “
  • ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
  • ಗಂಗರಲ್ಲಿ ಪ್ರಸಿದ್ದನಾದ ದೊರೆ “ ಶ್ರೀ ಪುರುಷ”
  • ರಾಚಮಲ್ಲನ ಮಂತ್ರಿಯಾದ “ಚಾವುಂಡ ರಾಯನು ” ಶ್ರವಣ ಬೆಳಗೋಳದಲ್ಲಿ ಕ್ರಿ.ಶ.980 ರಲ್ಲಿ “ಗೊಮ್ಮಟೇಶ್ವರನ ” ಏಕಶಿಲಾ ಮೂರ್ತಿಯನ್ನು ಕೆತ್ತಿಸಿದನು .
  • ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
  • ಚನ್ನಪಟ್ಟಣ್ಣದ “ ಮಾಕುಂದ ” ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ “ ಮನ್ನೇಯ ” ಇವರ ಿತರ ರಾಜಧಾನಿ .
  • ಗಂಗರನ್ನು “ ತಲಕಾಡಿನ ಗಂಗರು ” ಎಂದು ಪ್ರಸಿದ್ದರಾಗಿದ್ದರು .
  • ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ”
  • ಗಂಗರು “ ಗಂಗಟಕಾರರು ” ಎಂದು ಹೆಸರುವಾಸಿಯಾಗಿದ್ದರು .
  • ಗಂಗರು ಆಳಿತದ ಪ್ರದೇಶವನ್ನು “ ಗಂಗವಾಡಿ ಅಥವಾ ಗಂಗನಾಡು ” ಎಂದು ಕರೆಯುತ್ತಿದ್ದರು .
  • ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ .
  • ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 - 758 ರವರೆಗೆ ಆಳ್ವಿಕೆ ಮಾಡಿದರು .
  • ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು .
  • ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು .
  • “ತಲಕಾಡು ” ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .

ಗಂಗರ ಮೂಲ
  • ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷಾಕು ವಂಶದವರೆಂದು
  • ಕಣ್ವ ಮೂವಗ ಪ್ರಕಾರ ಿವರು “ ಕಣ್ವ ” ವಂಶದವರು ಎಂದು
  • ತಮಿಳು ಮೂಲ - ಇವರು ಮೂಲತಃ “ಪೆರೂರು ” ಆಗಿದ್ದು ( ಕೊಯಮತ್ತೂರು ) ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ .
  • ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು - ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .

ಗಂಗ ಮನೆತನದ ರಾಜರುಗಳು
  • ದಡಿಗ
  • ಒಂದನೇ ಮಾಧವ
  • ಎರಡನೇ ಮಾಧವ
  • ಮೂರನೇ ಮಾಧವ
  • ಅವನೀತ
  • ದುರ್ವಿನೀತ
  • ಶ್ರೀಪುರುಷ
  • ಎರಡನೇ ಶಿವಮಾರ
  • ಒಂದನೇ ರಾಚ ಮಲ್ಲ

ಗಂಗರ ರಾಜಕೀಯ ಇತಿಹಾಸ ( ದಡಿಗ or ಕೊಂಗುಣಿ ವರ್ಮ )
  • ಇವನು ಗಂಗ ವಂಶದ ಸ್ಥಾಪಕ
  • “ ಕುವಲಾಲ ಅಥವಾ ಕೋಲಾರ ” ಇವನ ರಾಜಧಾನಿ .
  • ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
  • ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .
  • ಈತನ ಗುರುವಿನ ಹೆಸರು - ಸಿಂಹ ನಂದಿ ( ಜೈನಗುರು )
  • ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ ದುಂಡಲಿ ” ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು .

ಒಂದನೇ ಮಾಧವ
  • ದಡಿಗನ ನಂತರ ಅಧಿಕಾರಕ್ಕೆ ಬಂದವನು
  • ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು
  • ಈತ ರಚಿಸಿದ ಕೃತಿ - “ ದತ್ತ ಸೂತ್ರ ”
  • ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು

ಮೂರನೇ ಮಾಧವ
  • ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ .
  • ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
  • ವಿಜಯ ಕೀರ್ತಿ - ಿವನ ದೀಕ್ಷಾ ಗುರುಗಳಾಗಿದ್ದರು .

ಅವನೀತ
  • ಈತ ಮೂರನೇ ಮಾಧವನ ಮಗ
  • ಈತ ಶಿವನ ಆರಾಧಕನಾಗಿದ್ದನು .
  • ಈತ ಸರ್ವಧರ್ಮ ಸಮನ್ವಯಿಯಾಗಿದ್ದನ್ನು
  • ಇತನನ್ನ ಶಾಸನಗಳು “ ಹರ ಚರಣಾರ ಎಂದ ಪ್ರಣಿಪಾತ ” ಎಂದು ಉಲ್ಲೇಕಿಸಿದೆ

ದುರ್ವಿನೀತ
  • ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ
  • ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ
  • ಈತ ವೈಷ್ಣವ ಮತಾವಲಂಬಿಯಾಗಿದ್ದನು
  • ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು
  • ಇತ “ಗುಣಾಡ್ಯನ ” “ ವಡ್ಡ ಕಥಾವನ್ನು ” ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು
  • ಇತನ ಗುರು - ಪುಷ್ಯಪಾದ ಅಥವಾ ದೇವಾನಂದಿ
  • ಇತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ . ಅಹೀತ , ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ
  • ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ .

ಶ್ರೀಪುರುಷ
  • ದುರ್ವಿನೀತ ನಂತರ ಅಧಿಕಾರಕ್ಕೆ ಬಂದವನು
  • ಈತ “ ಗಜಶಾಸ್ತ್ರ ” ಎಂಬ ಕೃತಿಯನ್ನ ರಚಿಸಿದರು
  • ಈತ ರಾಜಧಾನಿಯನ್ನು ಮಾಕುಂದದಿಂದ - ಮಾನ್ಯಪರಕ್ಕೆ ಬದಲಾಯಿಸಿದನು
  • ಒಂದನೇ ಶಿವಮಾರನಿಗೆ - ್ವನಿ ಮಹೇಂದ್ರ ಎಂಬ ಬಿರುದಿತ್ತು
  • “ತುಂಡಕ ಕದನ ” ದಲ್ಲಿ ಪಲ್ಲವರನ್ನು ಸೋಲಿಸಿದವನು
  • ಇವನ ಕಾಲದಲ್ಲಿ ಗಂಗರಾಜ್ಯ “ಶ್ರೀರಾಜ್ಯ ” ಎಂದು ಕರೆಸಿಕೊಂಡಿತು .
  • ಈತನ ಬಿರುದುಗಳು - ರಾಜಕೇಸರಿ , ಪೆರ್ಮಾಡಿ , ಶ್ರೀವಲ್ಲಭ , ಬೀಮಕೋಪ

ಎರಡನೇ ಶಿವಮಾರ
  • ಈತನ ಇನ್ನೊಂದು ಹೆಸರು - ಸೈಗೋತ
  • ಈತನ ಕೃತಿಗಳು - ಗಜಾಷ್ಮಕ , ಸೇತುಬಂಧ ಹಾಗೂ ಶಿವಮಾರ ತರ್ಕ
  • ಈತ ಶ್ರವಣಬೆಳಗೋಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು
  • ಈತನ ತಂದೆಯ ಹೆಸರು - ಶ್ರೀಪುರುಷ

ಎರಡನೇ ಬೂತುಗ
  • ಈತ “ ತತ್ಕೋಳಂ ಕದನದಲ್ಲಿ ” ಚೋಳರ ರಾಜಾದಿತ್ಯನನ್ನು ಕೊಂದನು .
  • ಆತನ ಬಿರುದು - ಮಹಾರಾಜಾದಿರಾಜ

ಮಂತ್ರಿ ಚಾವುಂಡರಾಯ
  • ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ
  • ಈತ ್ಜಿತಸೇನಾ ಭಟ್ಟರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ
  • ಈತನ ಬಿರುದು - ಸತ್ಯವಿದಿಷ್ಠಿರ
  • ಈತನ ಕೃತಿಗಳು - ಸಂಸ್ಕೃತದಲ್ಲಿ “ಚರಿತ್ರಾಸಾರ ” ಕನ್ನಡದಲ್ಲಿ ಚಾವುಂಡರಾಯ ಪುರಣ ಅಥವಾ ಅಥವಾ “ ತ್ರಿಷಷ್ಠಿ ಲಕ್ಷಣ ಮಹಾಪುರರಣ ” ಹಾಗೂ ಲೋಕೋಪಾಕರ ( ವಿಶ್ವಕೋಶ )
  • ಈತನ ಮೊದಲ ಹೆಸರು - ಚಾವುಂಡರಾಜ
  • ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು - “ರಾಯ ’
  • ಚಾವುಂಡರಾಯನ ಮಹಾತ್ಸಾಧಾನೆ - ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ
  • ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ - ರನ್ನ
  • ಈತ ಗಂಗರ ಅರಸ 2ನೇ ಮಾರಸಿಂಹ ಆಳ್ವಿಕೆಯಲ್ಲಿ - ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ
  • 4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು - ಸಮರ ಪರಶುರಾಮ
  • ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ ” ಎಂಬ ಬಿರುದು ಪಡೆದ .
  • ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣಸಂಗ ಸಿಂಗ ” ಎಂಬ ಬಿರುದನ್ನು ಪಡೆದ
  • ಈತನ ಬಿರುದು - ಭುಜ ವಿಕ್ರಮ , ಸಮರ ದುರಂಧರ
  • ಈತನ ತಾಯಿ - ಕಾಳಲಾದೇವಿ
  • ಗೊಮ್ಮಟೇಶ್ವರನನ್ನು ಕೆತ್ತಿನೆಯ ಮೇಲ್ವಿಚಾರಕ ಶಿಲ್ಪಿ - ಅರಿಪ್ಪಾನೇಮಿ
  • ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು - ಕ್ರಿ.ಶ.981 – 983
  • ಈತನ ಇನ್ನೊಂದು ಮಹಾನ್ ಕಾರ್ಯ - ಚಾವುಂಡರಾಯ ಬಸದಿಯ ನಿರ್ಮಾಣ

ಗಂಗರ ಆಢಳಿತ
  • ರಾಜ - ಆಡಳಿತದ ಮುಖ್ಯಸ್ಥ ಈತನನ್ನು “ ಧ್ಮಮಾಹಾರಾಜ” ರೆಂದು ಕರೆಯುತ್ತಿದ್ದರು .
  • ಮಂತ್ರಿ ಮಂಡಲ - ರಾಜನಿಗೆ ಸಹಾಯಕರಾಗಿದ್ದರು
  • ಪ್ರಧಾನ ಮಂತ್ರಿಯನ್ನು - ಸರ್ಮಾಧಿಕಾರಿ ಎಂದು ಕರೆಯುತ್ತಿದ್ದರು
  • ವಿದೇಶಾಂಗ ಮಂತ್ರಿಯನ್ನು - ಸಂಧಿ ವಿಗ್ರಹಿ ಎಂದು ಕರೆಯುತ್ತಿದ್ದರು
  • ಸೈನ್ಯದ ಮುಖ್ಯಸ್ಥ - ದಂಡನಾಯಕ ನಾಗಿರುತ್ತಿದ್ದ
  • ಖಜಾನೆ ಮುಖ್ಯಧಿಕಾರಿಯನ್ನು - ಹಿರಿಯ ಭಂಡಾರಿಕ ಎಂದು ಕರೆಯುತ್ತಿದ್ದರು
  • ರಾಜನ ಉಡುಪಗಳ ಉಸ್ತುವಾರಿಕ - ಮಹಾಪಸಾಯಿಕಿ
  • ಅರಮನೆಯ ಮೇಲ್ವಿಚಾರಕನನ್ನು - ಮನೆ ವರ್ಗಡೆ ಎಂದು ಕರೆಯುತ್ತಿದ್ದರು .
  • ಲೆಕ್ಕ ಪತ್ರಗಳ ವಿಭಾಗಾಧಿಕಾರಿಯನ್ನು - ಶ್ರೀಕರಣಿಕ ಎಂದು ಕರೆಯುತ್ತಿದ್ದರು
  • ರಾಜ್ಯವನ್ನು - ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು
  • ಪ್ರಾಂತ್ಯಗಳ ಮುಖ್ಯಸ್ಥ - ಪ್ರಾಂತ್ಯಾಧಿಕಾರಿ
  • ಪ್ರಾಂತ್ಯಗಳ ವಿಭಾಗಗಳು - ವಿಭಾಗ ಹಾಗೂ ಕಂಪನ
  • ವಿಷಯಗಳ ಮುಖ್ಯಸ್ಥ - ವಿಷಯ ಪತಿ
  • ಕಂಪನಗಳ ಮುಖ್ಯಸ್ಥ - ಗೌಡ ಅಥವಾ ನಾಡ ಗೌಡ
  • ನಗರಾಡಳಿತ ಮುಖ್ಯಸ್ಥ - ನಾಗರೀಕ
  • ಪಟ್ಟಣ್ಣದ ಮುಖ್ಯಸ್ಥ - ಪಟ್ಟಣ್ಣ ಸ್ವಾಮಿ
  • ಗ್ರಾಮಾಢಳಿತ - ಗೌಡ ಮತ್ತು ಕರಣಿಕನಿಗೆ ಸೇರಿತ್ತು .
  • ಗಜದಳದ ಮುಖ್ಯಸ್ಥ - ಗಜ ಸಹನಿ
  • ಅಶ್ವ ಪಡೆಯ ಮುಖ್ಯಸ್ಥ - ಅಶ್ವಾಧ್ಯಕ್ಷ
  • ಗಂಗರ ಕಾಲದ ನಾಣ್ಯಗಳು - ಪೊನ್ನ , ಸುವರ್ಣ , ಗದ್ಯಾಣ , ನಿಷ್ಕ , ಹಾಗೂ ಬೆಳ್ಳಿಯ ಪಣ , ಹಾಗೂ ಹಗ , ಕಾಸು
  • ಇವರ ಸಮಾಜದಲ್ಲಿ ರಾಜರ ಸ್ವಾಮಿ ನಿಷ್ಠೆಗೆ ಪ್ರಾಣತ್ಯಾಗ ಮಾಡುವ ಪದ್ದತಿ - ಗರುಡ ಪದ್ದತಿ , ಅಸ್ಥಿತ್ವದಲ್ಲಿತ್ತು
  • ಸಾಂಸ್ಕೃತಿಕ ಸಾಧನೆ
  • ಶ್ರವಣಬೆಳಗೋಳ ಹಾಗೂ ತಲಕಾಡು ಅವರ ಪ್ರಸಿದ್ದ ಶಿಕ್ಷಮ ಕೇಂದ್ರಗಳು
  • ಕಾಳಮುಬಾ , ಕಪಾಲಿಕಾ ಹಾಗೂ ಪಾಶುಪಥಿ - ಇವರ ಶೈವ ಪಂಥಗಳು
  • ಇವರ ಕಾಲದಲ್ಲಿ ಪ್ರಬಲವಾಗಿ ಬೆಳೆದ ಧರ್ಮ - ಜೈನ ಧರ್ಮ
  • ಗಂಗ ರಾಜ್ಯ ಸ್ಥಾಪನೆಗೆ ಕಾರಣನಾದ ಜೈನ ಮುನಿ - ಸಿಂಹ ನಂದಿ
  • ಶ್ರವಣಬೆಳಗೋಳ ಜೈನರ ಕಾಶಿ ಎಂದು ಪ್ರಸಿದ್ದಿಯಾಗಿದೆ
  • ಗಂಗರ ಆಶ್ರಯದಲ್ಲಿ ಬರೆಯಲ್ಪಟ್ಟ ಮಹಾ ಕೃತಿಗಳು
  • ದತ್ತಕ ಸೂತ್ರ - 2 ನೇ ಮಾಧವ
  • ಶೂದ್ರಂತ ಹಾಗೂ ಹರಿವಂಶ - ಗುಣವರ್ಮ
  • ಛಂದೋಬುದಿ - 1ನೇ ನಾಗವರ್ಮ
  • ಗಜಾಷ್ಟಕ , ಸೇತುಬಂಧ ,ಶಿವಮಾರ ತರ್ಕ - 2 ನೇ ಶಿವಮಾರ
  • ಚಂದ್ರ ಪ್ರಭಾ ಪುರಾಮ - ವೀರನಂದಿ
  • ಬೃಹತ್ ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದ ಹಾಗೂ ಭಾರವಿಯ ಕಿರತಾರ್ಜುನಿಯ ಕೃತಿಗೆ ಭಾಷ್ಯ - ದುರ್ವೀನಿತ
  • ಗಜಶಾಸ್ತ್ರ - ಶ್ರೀಪುರುಷ

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಂಗರ ಕೊಡುಗೆ :-
  • ಇವರ ವಾಸ್ತು ಶಿಲ್ಪ ಕದಂಬರು ಹಾಗೂ ಪಲ್ಲವರ ಕಲೆಯ ಮಿಶ್ರಣವಾಗಿದೆ
  • ಮನ್ನೇಯ ಕಪಿಲಶ್ವರ ದೇವಾಲಾಯ - ವಾಸ್ತು ಶಿಲ್ಪಿ ದೃಷ್ಠಿಯಿಂದ ಪ್ರಸಿದ್ದಿ
  • ಗಂಗರ ಕಾಲದ ಪ್ರಮುಖ ಬಸದಿಗಳು - ಪಾಶ್ವನಾಥ ಬಸದಿ ಹಾಗೂ ಚಾವುಂಡರಾಯ ಬಸದಿ
  • ಶ್ರಣಬೆಳಗೋಳದಲ್ಲಿರುವ ಪ್ರಮುಖ ಸ್ಥಂಭಗಳು - ಮಾನಸ್ತಂಭ , ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮ ದೇವರ ಸ್ತಂಭ
  • ಗಂಗರ ಕಾಲದ ಅಭೂತ ಪೂರ್ವ ಶಿಲ್ಪ ಕಲಾ ಕೆತ್ತನೆ - ಶ್ರವಮಬೆಳಗೋಳದ ಗೊಮ್ಮಟ
  • ಇವರ ಕಾಲದಲ್ಲಿ ಪ್ರಸಿದ್ದ ನೃತ್ಯಗಾತಿ - ಬಾಚಲು ದೇವಿ
  • ಬಾಚಲು ದೇವಿಗೆ ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ

Extra tips

  • ವಾದಿಮದ ಗಜೇಂದ್ರ ಎಂದು ಹೆಸರು ಗಳಿಸಿದ್ದ ಬೌದ್ಧ ಪಂಡಿತ - ಪರಿವ್ರಾಜಕ
  • ವಾದಿಭು ಸಿಂಹ ಎಂಬ ಬಿರುದನ್ನು ಹೊಂದಿದ್ದವನು - ಮಾಧವಭಟ್ಟ
  • ಮಾಧವ ಭಟ್ಟನಿಗೆ ವಾದಿಭು ಸಿಂಹ ಎಂಬ ಬಿರುದನ್ನು ನೀಡಿದ ಗಂಗರ ಅರಸ - ಹರಿವರ್ಮ
  • ಮೂರನೇ ಮಾಧವನ ಮತ್ತೊಂದು ಹೆಸರು - ತಡಂಗಾಲ ಮಾಧವ
  • “ ಶಿಷ್ಯ ಪ್ರಿಯ ಹಾಗೂ ಅವನಿ ಮಹೇಂದ್ರ ” ಎಂಬ ಬಿರುದನ್ನು ಪಡೆದಿದ್ದವರು - ಒಂದನೇ ಶಿವಮಾರ
  • ನೀತಿ ಮಾರ್ಗ , ರಣ ವಿಕ್ರಮ ಎಂಬ ಬಿರುದನ್ನು ಹೊಂದಿದ್ದ ಅರಸ - ಎರೆಯಾಂಗ
  • ಗರುಡ ಪದ್ದತಿಯ ಮೂಲಕ ಅಸುನಿಗಿದವರ ಕುಟುಂಬಕ್ಕೆ ಬಲಿದಾನವಾಗಿ ನೀಡುತ್ತಿದ್ದ ಭೂಮಿಯನ್ನು - ಕೀಳ್ಗುಂಟೆ ಎಂದು ಕರೆಯುವರು
  • ಮಹೇಂದ್ರ ಕತಕ ಎಂಬ ಬಿರುದನ್ನು ಪಡೆದಿದ್ದವನು - ಎರೆಯಪು
  • ಘೂರ್ಜ ರಾಜಾಧಿರಾಜ ಎಂಬ ಬಿರುದನ್ನು ಹೊಂದಿದವನು - ಎರಡನೇ ಮಾರಸಿಂಹ
  • ಗಂಗರ ಪ್ರಮುಖ ಕಲೆ ಮತ್ತು ವಾಸ್ತು ಶಿಲ್ಪ ಕೇಂದ್ರ - ತಲಕಾಡು
  • ಗೊಮ್ಮಟೇಶ್ವರನ ವಿಗ್ರಹವನ್ನು ನಿಖರವಾದ ಅಳತೆ - 58.8 ಅಡಿ ಎತ್ತರ ಎಂದು ಗೊತ್ತುಮಾಡಿದ ಉಪಕರಣ - 1980 ರಲ್ಲಿ ಕರ್ನಾಟಕ ವಿ.ವಿ. ನಿಲಯದ ಭಾರತೀಯ ಕಲಾ ಸಂಸ್ಥೆಯ - Theodolight or Institute of Indian art
  • ಕರ್ನಾಟಕವನ್ನಾಳಿದ ಮನೆತನಗಳಲ್ಲಿಯೇ ದೀರ್ಘಕಾಲ ಆಳ್ವಿಕೆ ನಡೆಸಿದ ಮನೆತನ - ತಲಕಾಡಿನ ಗಂಗರು
  • ಕೋಲಾರದ ಪ್ರಾಚೀನ ಹೆಸರು - ಕುವಾಲಾಲ
  • ತಲಕಾಡಿನ ಪ್ರಾಚೀನ ಹೆಸರು - ಕಳವನ ಪುರ
  • ಗಂಗರ ರಾಜಧಾನಿ ತಲಕಾಡು ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಮೈಸೂರು
  • ಗಂಗ ರಾಜ್ಯದ ಸ್ಥಾಪಕರು - ದಡಿಗ ಮತ್ತು ಮಾಧವರು
  • ಗಂಗರ ಕೊನೆಯ ರಾಜಧಾನಿ - ಮಾನ್ಯ ಪುರ
  • ಮಾನ್ಯಪುರ ಪ್ರಸ್ತುತ - ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿದೆ
  • ದುರ್ವೀನಿತನ ತಂದೆ ತಾಯಿಗಳು - ಅವನಿತ ಹಾಗೂ ಜೇಷ್ಠದೇವಿ
  • ದುರ್ವೀನಿತನ ಗುರುವಿನ ಹೆಸರು - ಪೂಜ್ಯಾಪಾದ
  • ಪೂಜ್ಯಪಾದನ ಕೃತಿ - ಶಬ್ದಾವತಾರ
  • ಪೆರ್ಮಾಡಿ ಎಂಬ ಬಿರುದು ಧರಿಸಿದ್ದ ಗಂಗರ ದೊರೆ - ಶ್ರೀಪುರುಷ
  • ಶ್ರೀಪುರುಷನ ಕಾಲದ ಗಂಗರ ರಾಜಧಾನಿ - ಮಾನ್ಯ ಪುರ
  • ಸೈಗೊಟ್ಟ ಶಿವಮಾರ ಎಂಬ ಬಿರುದುಳ್ಳ ಅರಸ - 2 ನೇ ಶಿವಮಾರ
  • ಗಂಗರ ಕೊನೆಯ ಪ್ರಮುಖ ದೊರೆ - 4 ನೇ ರಾಚಮಲ್ಲ
  • ವೀರ ಮಾರ್ತಾಂಡ ಎಂಬ ಬಿರುದ್ದನ್ನ ಹೊಂದಿದವರು - ಚಾವುಂಡರಾಯ
  • ಚಾವುಂಡ ರಾಯ ಪಾಂಡ್ಯ ಅರಸ ರಾಜ್ಯಾಧಿತ್ಯನನ್ನ ಸೋಲಿಸಿ ಧರಿಸಿದ್ದ ಬಿರುದು - ರಣಸಿಂಗ ಸಿಂಹ
  • ಚಾವುಂಡರಾಯನ ಕನ್ನಡ ಕೃತಿ ಚಾವುಂಡರಾಯ ಪುರಾಣದ ವಿಷಯ - ಜೈನ 24 ನೇ ತೀರ್ಥಂಕರನನ್ನು ಕುರಿತದ್ದಾಗಿದೆ
  • ಗಂಗರ ಕೊನೆಯ ಅರಸ - ರಕ್ಕಸ ಗಂಗ
  • ಗಂಗರ ಆಡಳಿತವನ್ನು ಕೊನೆಗಾಮಿಸಿದವನು - ಚೋಳ ದೊರೆ ಒಂದನೇ ರಾಜೇಂದ್ರ ಚೋಳ
  • ವರ್ಧಮಾನ ಪುರಾಣ ಕೃತಿಯ ಕರ್ತೃ - ಅಗಸ
  • ಸಮರಪರಶುರಾಮ ಹಾಗೂ ವೈರಿಕು ಕಾಲದಂಡ ಎಂಬ ಬಿರುದನ್ನು ಹೊಂದಿದ್ದವರು - ಚಾವುಂಡರಾಯ
  • ಗೊಮ್ಮಟೇಶ್ವರ ಈ ಬೆಟ್ಟದಲ್ಲಿದೆ - ವಿಂದ್ಯಾಗಿರಿ ಬೆಟ್ಟ
  • ಗೊಮ್ಮಟೇಶ್ವರ ಇರುವುದು - ಹಾಸನ ಜಿಲ್ಲೆಯಲ್ಲಿ
  • ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ
  • ಗಂಗರ ಮೊದಲ ರಾಜಧಾನಿ - ಕುವಲಾಲ
  • ಗಂಗರ ಎರಡನೇ ರಾಜಧಾನಿ - ತಲಕಾಡು
  • ಗಂಗರ ಮೂರನೇ ರಾಜಧಾನಿ - ಮಾಕುಂದ
  • ಗಂಗರ ಕಾಲದ ಗಣ್ಯ ಕೇಂದ್ರ - ನಂದಿ ದುರ್ಗ ಅಥವಾ ನಂದಿ ಬೆಟ್ಟ
  • ದಡಿಗನಿಗೆ ಇರುವ ಇನ್ನೋಂದು ಹೆಸರು - ಕೊಂಗುಣಿವರ್ಮ
  • ಗೊಮ್ಮಟೇಶ್ವರನ ವಿಗ್ರಹ ನಿರ್ಮಾಣವಾದ ವರ್ಷ - ಕ್ರಿ.ಶ. 982
  • ಗಂಗರ ಕಾಲದ ಗ್ರಾಮದ ಮುಖ್ಯಸ್ಥ - ಪ್ರಭುಗಾವುಂಡ
  • ಗಂಗರ ಕಾಲದಲ್ಲಿದ್ದ ಹಿರಿಯ ರೈತರ ಸಮಿತಿ - ಪ್ರಜೆಗಾಮುಂಡ
  • ಗಂಗರ ಕಾಲದಲ್ಲಿದ ಕುಟುಂಬ ಪ್ರಮುಖರ ಕೂಟ - ಮಹಾಜನ
  • ಗಂಗರ ಕಾಲದಲ್ಲಿದ ದೊಡ್ಡ ನೆಯ್ಗೆಯ ಕೇಂದ್ರ - ವಿಜಯ ಪುರ
  • ಗಂಗರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು , ಅಗ್ರಹಾರ , ಹಾಗೂ ಬ್ರಹ್ಮಪುರಿ
  • ಬ್ರಹ್ಮಪುರಿ ಎಂದರೆ - ಒಂದು ಪೇಟೆಯಲ್ಲಿನ ಬ್ರಾಹ್ಮಣರ ಬೀದಿ
  • ಗಂಗರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ - ಶ್ರವಮಬೆಳಗೋಳ ಜೈನ ಮಠ
  • ಬಾಣನ “ ಕಾದಂಬರಿ ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು - ನಾಗವರ್ಮ
  • ಗಂಗರ ಕಾಲದಲ್ಲಿ ಭತ್ತ ಕುಟ್ಟುವಾಗ ಹೇಳುವ ಗೀತೆಗಳನ್ನು ಒಳಗೊಂಡ ಕೃತಿ - ಗಜಾಷ್ಟಕ
  • ಗಂಗರ ಕಾಲದ ಪಂಚಕೂಟ ಬಸದಿ ಇರುವ ಸ್ಥಳ - ಕದಂಬ ಹಳ್ಳಿ
  • ಬೆಂಗಳೂರಿನ ಮ್ಯೂಸಿಯಂ ನಲ್ಲಿರುವ ಗಂಗರ ಕಾಲದ ವೀರಗಲ್ಲಿನ ಹೆಸರು - ಬೇಗೂರು ವೀರಗಲ್ಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ