ಭಾರತ ರತ್ನ ಪ್ರಶಸ್ತಿ
- ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ.
- ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ.
- ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಗಾಂಧೀಜಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು.
- ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
- ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ.
- ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ 1990 ರಲ್ಲಿ ಮತ್ತು ಖಾನ್ ಅಬ್ದುಲ್ ಗಫರ್ ಖಾನ್. 1987 ರಲ್ಲಿ.
- ಮದರ್ ಥೆರೆಸಾರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಿ 1980 ರಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
- ಇಲ್ಲಿಯವರೆಗೆ 2013 ವರೆಗೆ 43 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
- ಮೊದಲ ಪ್ರಶಸ್ತಿ ವಿಜೇತ ವಿದೇಶಿ ವ್ಯಕ್ತಿ ಖಾನ್ ಅಬ್ದುಲ್ ಗಫರ್ ಖಾನ್ 1987 ರಲ್ಲಿ. (ಪಾಕಿಸ್ತಾನದ ಪ್ರಜೆ, ಭಾರತ ಸ್ವತಂತ್ರ ಪಡೆಯುವ ಮುಂಚೆ ಭಾರತೀಯ ಪ್ರಜೆಯಾಗಿದ್ದ.
- ಭಾರತ ರತ್ನ ಪ್ರಶಸ್ತಿ ಏಕೈಕ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾ.1992 ರಲ್ಲಿ.
- ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಕಿರಿಯ ವ್ಯಕ್ತಿ ಸಚಿನ ತೆಂಡೂಲ್ಕರ್ (43 ನೇ ವಯಸ್ಸಿನಲ್ಲಿ 2013 ರಲ್ಲಿ)
- ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಗುಲ್ಜಾರಿಲಾಲ್ ನಂದಾ (99 ನೇ ವಯಸ್ಸಿನಲ್ಲಿ 1997 ರಲ್ಲಿ)
- ಭಾರತ ರತ್ನ ಪ್ರಶಸ್ತಿ ವಿಜೇತ ಕರ್ನಾಟಕದವರು ಸರ್,ಎಮ್,ವಿಶ್ವೇಶ್ವರಯ್ಯ (1955), ಭೀಮಶೇನ ಜೋಷಿ (2008), ಸಿ,ಎನ್,ರಾವ್ (2013)
- ಪ್ರಶಸ್ತಿ ವಿಜೇತ ಮೊದಲ ಮಹಿಳೆ ಇಂದಿರಾಗಾಂಧಿ (1971)
- ಭಾರತದ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಮುರಾರ್ಜಿ ದೇಸಾಯಿ, (1991 ರಲ್ಲಿ ಪ್ರಶಸ್ತಿ ವಿಜೇತರಾದರು)
- ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನಿಗಳು ಜವಾಹರ್ ಲಾಲ್ ನೆಹರೂ (1955) ಇಂದಿರಾ ಗಾಂಧಿ (1971) ರಾಜೀವ ಗಾಂಧಿ (1991) ಮೊರಾರ್ಜಿ ದೇಸಾಯಿ (1991) ಗುಲ್ಜಾರಿಲಾಲ್ ನಂದಾ (1997)
- ಪ್ರಶಸ್ತಿ ವಿಜೇತ ರಾಷ್ಟ್ರಪತಿಗಳು :- ಸರ್ವಪಳ್ಳಿ ರಾದಾಕೃಷ್ಣನ್(1954) ಬಾಬು ರಾಜೇಂದ್ರ ಪ್ರಸಾದ (1962) ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
- ಪ್ರಶಸ್ತಿ ಪಡೆದು ರಾಷ್ಟ್ರಪತಿಯಾದವರು :- ಸರ್ವಪಳ್ಳಿ ರಾದಾಕೃಷ್ಣನ್(1954)
ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997) - ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಪಡೆದವರು :- ಡಾ. ಚಂದ್ರಶೇಖರ್ ವೆಂಕಟರಾಮನ್, ಮದರ್ ತೆರೆಸಾ, ಅಮರ್ತ್ಯ ಸೇನ್.
- ಪ್ರಶಸ್ತಿ ಪಡೆದ ಮೊದಲ ನಟ :-ಜಿ ರಾಮಚಂದ್ರನ್
- 2014 ರಲ್ಲಿ ಪ್ರಶಸ್ತಿ ವಿಜೇತರು :- ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ ಮೋಹನ್ ಮಾಳವಿಯ(ಮರೋಣತ್ತರವಾಗಿ)
ಪ್ರಶಸ್ತಿ ವಿಜೇತರಿಗೆ ದೊರೆಯುವ ಸೌಲಭ್ಯಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ